ರಾತ್ರಿ ಮನೆಯಲ್ಲಿ ಪಾರ್ಕ್ ಮಾಡಿದ ಬೈಕ್ ಬೆಳಗ್ಗೆ ನಾಪತ್ತೆ!

 

 

ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಆರ್.ಎಂ.ಎಲ್. ನಗರದ ಎರಡನೇ ಹಂತದಲ್ಲಿರುವ ಮನೆಯ ಮುಂದೆ ನಿಲ್ಲಿಸಿದ ಬೈಕ್ ಅನ್ನು ಕಳವು ಮಾಡಲಾಗಿದೆ.
ಇಮ್ತಿಯಾಜ್ ಅಹಮ್ಮದ್ ಎಂಬುವವರಿಗೆ ಸೇರಿದ ಬೈಕ್ ಕಳವು ಮಾಡಲಾಗಿದೆ. ಪುರದಾಳು ರಸ್ತೆಯಲ್ಲಿರುವ ತಮ್ಮ‌ಜಮೀನಿಗೆ ಹೋಗಿ ರಾತ್ರಿ 1ಗಂಟೆಯ ಸುಮಾರಿಗೆ ಬಂದಿದ್ದಾರೆ. ಆಗ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಬೆಳಗ್ಗೆ ಎದ್ದು ನೋಡುವ ಹೊತ್ತಿಗೆ ನಾಪತ್ತೆಯಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!