ದಾವಣಗೆರೆಯಲ್ಲಿ ಸ್ಫೋಟಕ‌ ಹೇಳಿಕೆ ನೀಡಿದ ಯಡಿಯೂರಪ್ಪ, ರಾಜ್ಯ ರಾಜಕಾರಣದಲ್ಲಿ ಸಂಚಲನ

 

 

ಸುದ್ದಿ ಕಣಜ.ಕಾಂ | KARNATAKA | POLITICS
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಾವಣಗೆರೆಯಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನವೇ ಮೂಡಿದೆ!
ನಗರದ ತ್ರಿಶೂಲ್ ಕಲಾ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿದರು.

READ | ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ‌ ಗುಡ್ ನ್ಯೂಸ್ ನೀಡಿದ ಯುಪಿಎಸ್.ಸಿ, ನಡೆಯಲಿದೆ ಈ ಹುದ್ದೆಗಳ‌ ನೇಮಕಾತಿ, ಮಾಹಿತಿಗಾಗಿ ಕ್ಲಿಕ್ಕಿಸಿ

ಯಡಿಯೂರಪ್ಪ ನೀಡಿದ ಹೇಳಿಕೆ ಏನು?

  1. ಕಾಂಗ್ರೆಸ್ ಈಗಾಗಲೇ ರಾಜ್ಯದಲ್ಲಿ ಎದ್ದು ಕುಳಿತಿದೆ. ಬಿಜೆಪಿ‌‌ಯೂ ಎಚ್ಚೆತ್ತುಕೊಳ್ಳಬೇಕು. ವಿರೋಧ ಪಕ್ಷವನ್ನು ಹಗುರವಾಗಿ ಪರಿಗಣಿಸಬಾರದು.
  2. ವಿರೋಧ ಪಕ್ಷಕ್ಕೆ ಅದರದ್ದೇ ಲೆಕ್ಕಾಚಾರವಿದೆ. ಈಗಾಗಲೇ ಬಿಜೆಪಿ ಮುಖಂಡರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದನ್ನು ಆ ಮುಖಂಡರೇ ನನಗೆ ತಿಳಿಸಿದ್ದಾರೆ. ಅತ್ಯಂತ ಎಚ್ಚರಿಕೆಯಿಂದ ಬಿಜೆಪಿ‌ ಹೆಜ್ಜೆ ಇಡಬೇಕು. ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಕಾಂಗ್ರೆಸ್ ನವರೇ ಬಿಜೆಪಿ ಬರಲಿದ್ದಾರೆ.
  3. ಬಿಜೆಪಿಗೆ ಎಸ್ಸಿ, ಎಸ್ಟಿ ಸಮುದಾಯದ ನಾಯಕರನ್ನು ಹೆಚ್ಚಿನ ಸಂಖ್ಯೆಯಲ್ಲಿ‌ ಕರೆದುಕೊಂಡು ಬರಬೇಕು. ಅವರನ್ನು ವಿಶ್ವಾಸಕ್ಕೆ ಪಡೆಯಬೇಕು. ಬೂತ್ ಮಟ್ಟದಲ್ಲಿ ಕನಿಷ್ಠ 25 ಮಹಿಳೆಯರ ಮೋರ್ಚಾ ಮಾಡಿ, ಪಕ್ಷ ಮತ್ತಷ್ಟು ಬಲಪಡಿಸಬೇಕು.
  4. ಧಾರ್ಮಿಕ ಕೇಂದ್ರ ತೆರವು ವಿಚಾರದಲ್ಲಿ ಲೋಪಗಳಿದ್ದರೆ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಾಗುವುದು. ಯಾರಲ್ಲೂ ಭೀತಿ‌ ಬೇಡ
  5. ನಾನೊಬ್ಬನೇ ಪ್ರವಾಸ ಹೋಗಲ್ಲ. ನನ್ನೊಂದಿಗೆ ಸಂಸದರು, ಶಾಸಕರು, ಪರಿಷತ್ ಸದಸ್ಯರು ಬರಲಿದ್ದಾರೆ.

ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿತರಿದ್ದರು.

https://www.suddikanaja.com/2021/06/01/mp-by-raghavendra-statement-on-khelo-india/

error: Content is protected !!