ಸೋಶಿಯಲ್ ಮೀಡಿಯಾಗೆ ಫೋಟೊ ಹಾಕುವ ಮುನ್ನ ಹುಷಾರ್, ಫೋಟೊಗಳನ್ನು ಕ್ರೈಂ ಎಪಿಸೋಡ್‍ಗೆ ಬಳಸಿದವರ ವಿರುದ್ಧ ಕೇಸ್

 

 

ಸುದ್ದಿ ಕಣಜ.ಕಾಂ | DISTRICT | CYBER CRIME
ಶಿವಮೊಗ್ಗ: ಭದ್ರಾವತಿ ಮೂಲದ ಇಬ್ಬರು ಯುವಕರ ಫೋಟೊಗಳನ್ನು ಖಾಸಗಿ ಸುದ್ದಿ ವಾಹಿನಿಯೊಂದರ ಹೆಸರಿನಲ್ಲಿ ಮೂಡಿಬರುವ ಕ್ರೈಂ ಡೈರಿಗೆ ಹೋಲುವಂತೆ ವಿಡಿಯೋ ತಯಾರಿಸಿ ಮಾನಕ್ಕೆ ಧಕ್ಕೆ ಉಂಟು ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ಶಿವಮೊಗ್ಗ ಎಸ್.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ ಸ್ಟಾ ಗ್ರಾಂನಲ್ಲಿದ್ದ ಯುವಕರ ಫೋಟೊಗಳನ್ನು ಬಳಸಿಕೊಂಡು ಅಶ್ಲೀಲ ಸಂಗೀತ ಹಾಕಿ ವಿಡಿಯೋ ತಯಾರಿಸಿ ಇನ್‍ಸ್ಟಾ ಗ್ರಾಂಗೆ ಅಳವಡಿಸಲಾಗಿದೆ.  ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

error: Content is protected !!