ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮೊಬೈಲ್ ಕಳೆದುಹೋದ ಬಗ್ಗೆ ದೂರು ನೀಡಿದ್ದೇ ವಾರಸುದಾರರಿಗೆ ಪೊಲೀಸ್ ಇಲಾಖೆ ಲಕ್ಷಾಂತರ ಮೌಲ್ಯದ ಮೊಬೈಲ್’ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಿದೆ.
- ಕೇಸ್ ನಂಬರ್ 1
ಸೈಬರ್ ಕ್ರೈಂ ಠಾಣೆ ಪೊಲೀಸ್ ನಿರೀಕ್ಷಕ ಸಂತೋಷ್ ಎಂ. ಪಾಟೀಲ್ ನೇತೃತ್ವದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಎ.ಎನ್.ಸಿ ಘಟಕದ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವು CEIR (Central Equipment Identity Register) ಪೊರ್ಟಲ್ ನಲ್ಲಿ ಪತ್ತೆಯಾದ ಅಂದಾಜು ₹12,10,000 ಮೌಲ್ಯದ ಒಟ್ಟು 114 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. - ಕೇಸ್ ನಂಬರ್ 2
ಕೋಟೆ ಠಾಣೆಯ ಪೊಲೀಸ್ ನಿರೀಕ್ಷಕ ಶಿವಪ್ರಸಾದ ರಾವ್ ನೇತೃತ್ವದ ತಂಡವು CEIR (Central Equipment Identity Register) ಪೊರ್ಟಲ್ ನ ಸಹಾಯದಿಂದ ಅಂದಾಜು ₹1,00,000 ಮೌಲ್ಯದ ಒಟ್ಟು 12 ಮೊಬೈಲ್ ಪೋನ್ ಗಳನ್ನು ಪತ್ತೆ ಹಚ್ಚಿದ್ದಾರೆ. - ಕೇಸ್ ನಂಬರ್ 3
ಭದ್ರಾವತಿ ನ್ಯೂಟೌನ್ ಪಿ.ಎಸ್.ಐ ರಂಗನಾಥ್ ನೇತೃತ್ವದ ತಂಡವು ಪೋರ್ಟಲ್ ಸಹಾಯದಿಂದ ಅಂದಾಜು ಮೌಲ್ಯ ₹2,50,000 ಒಟ್ಟು 18 ಮೊಬೈಲ್ ಪೋನ್ ಗಳನ್ನು ಪತ್ತೆ ಮಾಡಿರುತ್ತಾರೆ.
ದಾಖಲೆ ಮೌಲ್ಯದ ಮೊಬೈಲ್ ಗಳು ಪತ್ತೆ
ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ CEIR (Central Equipment Identity Register) ಪೊರ್ಟಲ್ ಹಾಗೂ IMEI ಸರ್ಚ್ ಸಹಾಯದಿಂದ ಅಂದಾಜು ₹15,60,000 ಮೌಲ್ಯದ ಒಟ್ಟು 144 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಲಾಗಿರುತ್ತದೆ.
READ | ‘ಬ್ರ್ಯಾಂಡ್ ಶಿವಮೊಗ್ಗ’ಕ್ಕಾಗಿ ನಡೆಯಲಿದೆ ಅಂತರರಾಷ್ಟ್ರೀಯ ಬೈಕ್ ರ್ಯಾಲಿ, ಎಲ್ಲೆಲ್ಲಿ ಪ್ರಯಾಣ, ಇಲ್ಲಿದೆ ಡಿಟೇಲ್ಸ್
ವಾರಸುದಾರರ ಕೈಸೇರಿದ ಮೊಬೈಲ್
ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ಅವರು ಪತ್ತೆ ಮಾಡಲಾದ ಮೊಬೈಲ್ ಫೋನ್ ಗಳನ್ನು ಮಾಲೀಕರುಗಳಿಗೆ ಹಿಂದಿರುಗಿಸಿದರು. ಸದರಿ ತಂಡಗಳ ಉತ್ತಮವಾದ ಕಾರ್ಯವನ್ನು ಎಸ್.ಪಿ ಪ್ರಶಂಸಿಸಿದ್ದಾರೆ.
ಕಳೆದುಹೋದ ಮೊಬೈಲ್ ಪತ್ತೆ ಹಚ್ಚುವುದು ಹೇಗೆ?
- ಸಾರ್ವಜನಿಕರು ತಮ್ಮ ಮೊಬೈಲ್ ಫೊನ್ ಕಳೆದು ಹೋದಲ್ಲಿ ಠಾಣೆಗೆ ಭೇಟಿ ನೀಡದೇ ಸ್ವತಃ ತಾವೇ KSP ಅಪ್ಲಿಕೇಷನ್ ನ e-LOST APP ಮೂಲಕ ದೂರು ದಾಖಲಿಸಿ, ಸ್ವೀಕೃತಿಯನ್ನು ಪಡೆದುಕೊಳ್ಳಬೇಕು.
- https://www.ceir.gov.in ವೆಬ್ ಪೋರ್ಟಲ್ ಭೇಟಿ ನೀಡಿ Block Stolen/ Lost Mobile ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ, ಸದರಿ ಫಾರಂ ನಲ್ಲಿ ಕಳೆದು ಹೋದ ಮೊಬೈಲ್ ಫೋನ್ ನ IMEI ನಂಬರ್, ಮೊಬೈಲ್ ನಂಬರ್ ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವ ಮುಖಾಂತರ ದೂರನ್ನು ದಾಖಲಿಬಹುದು.
- ದೂರು ದಾಖಲಾದ 24 ಗಂಟೆಯ ಒಳಗಾಗಿ ಕಳೆದು ಹೋದ ಮೊಬೈಲ್ ಫೋನ್ ಬ್ಲಾಕ್ ಆಗುತ್ತದೆ. ಇದರಿಂದಾಗಿ ನಿಮ್ಮ ಮೊಬೈಲ್ ಪೋನ್ ದುರ್ಬಳಕೆಯಾಗದಂತೆ ತಡೆಯಬಹುದಾಗಿರುತ್ತದೆ.
- ನಿಮ್ಮ ಮೊಬೈಲ್ ಫೋನ್ ಅನ್ನು ಯಾರಾದರೂ ಬಳಕೆ ಮಾಡಲು ಪ್ರಯತ್ನಿಸಿದ್ದಲ್ಲಿ ಅವರ ವಿವರವು ದೊರಕುತ್ತದೆ. ಇದರಿಂದ ಸುಲಭವಾಗಿ ತಮ್ಮ ಕಳೆದು ಹೋದ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಲು ಸಾಧ್ಯವಿರುತ್ತದೆ. ಆದ್ದರಿಂದ ಎಲ್ಲ ಸಾರ್ವಜನಿಕರು CEIR ಪೋರ್ಟಲ್ ನ ಉಪಯೋಗವನ್ನು ಪಡೆದುಕೊಳ್ಳುವುದು.
ಏನಿದು ಸಿಇಐಆರ್?
ಕೇಂದ್ರ ಸರ್ಕಾರವು ದೂರಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕಳೆದು ಹೋದ ಮೊಬೈಲ್ ಅನ್ನು ಪತ್ತೆ ಮಾಡುವ ಉದ್ದೇಶದಿಂದ CEIR (Central Equipment Identity Register) ಪೊರ್ಟಲ್ ಜಾರಿಗೆ ತಂದಿದೆ. ಸಾರ್ವಜನಿಕರು ತಮ್ಮ ಕಳೆದು ಹೋದ ಮೊಬೈಲ್ ಮಾಹಿತಿಯನ್ನು ಸದರಿ CEIR (Central Equipment Identity Register) ನೋಂದಾಯಿಸಬಹುದಾಗಿದೆ. ಪ್ರತಿ ಜಿಲ್ಲೆಯ ಸಿಇಎನ್ ಕೈಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಇದರ ನೋಡಲ್ ಅಧಿಕಾರಿಗಳಾಗಿರುತ್ತಾರೆ.
BJP Join | ಕಾಗೋಡು ಪುತ್ರಿ ಡಾ.ರಾಜನಂದಿನಿ, ಕಟ್ಟಾ ಶಿಷ್ಯ ಹೊನಗೋಡು ಬಿಜೆಪಿ ಸೇರ್ಪಡೆ ಹಿಂದಿನ ಕಾರಣವೇನು?