ಶಿವಮೊಗ್ಗ ರೈಲ್ವೆ‌ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಸೀಜ್, ಬಟ್ಟೆ ಬ್ಯಾಗ್ ವಿತರಣೆ

 

 

ಸುದ್ದಿ‌ ಕಣಜ.ಕಾಂ | DISTRICT | RAILWAY STATION
ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ಪ್ರಯಾಣಿಕರಿಂದ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಸೀಜ್ ಮಾಡಿ ಅವರಿಗೆ ಬಟ್ಟೆಯ ಬ್ಯಾಗ್ ಗಳನ್ನು ವಿತರಣೆ ಮಾಡಲಾಯಿತು.

READ | ಸೋಶಿಯಲ್ ಮೀಡಿಯಾಗೆ ಫೋಟೊ ಹಾಕುವ ಮುನ್ನ ಹುಷಾರ್, ಫೋಟೊಗಳನ್ನು ಕ್ರೈಂ ಎಪಿಸೋಡ್‍ಗೆ ಬಳಸಿದವರ ವಿರುದ್ಧ ಕೇಸ್

ಈ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ತರುವುದನ್ನು ಇಲಾಖೆಯಿಂದ ನಿರ್ಬಂಧಿಸಲಾಗಿತ್ತು. ಅಷ್ಟೊತ್ತಿಗೆ ಕೊರೊನಾ ಎರಡನೇ ಅಲೆ ಬಂದು ಜನಸಂಚಾರವೇ ಇಲ್ಲವಾಗಿತ್ತು. ಮತ್ತೆ ಜನರ ಓಡಾಟ‌ ಮುಂಚೆಯಂತೆಯೇ ಆಗಿದ್ದು, ರೈಲ್ವೆ ಸಂಚಾರವು ಸಹಜತೆಗೆ ಮರಳಿದೆ. ಆದರೆ, ಜನ ಮಾತ್ರ ಪ್ಲಾಸ್ಟಿಕ್ ಬ್ಯಾಗ್ ತರುವುದನ್ನು ನಿಲ್ಲಿಸಿಲ್ಲ. ಆದ್ದರಿಂದ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಅವರಿಗೆ ಉಚಿತವಾಗಿ ಬಟ್ಟೆಯ ಬ್ಯಾಗ್ ಗಳನ್ನು ನೀಡಲಾಯಿತು.

error: Content is protected !!