ಇಬ್ಬರು ತಹಸೀಲ್ದಾರ್ ಸೇರಿ ಐವರ ವಿರುದ್ಧ ದಾಖಲಾಯ್ತು ಎಫ್‍ಐಆರ್, ಕಾರಣವೇನು?

 

 

ಸುದ್ದಿ ಕಣಜ.ಕಾಂ | DISTRICT | CRIME
ಶಿವಮೊಗ್ಗ: ಉದ್ಯೋಗಕ್ಕಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ ವ್ಯಕ್ತಿ ಹಾಗೂ ಸರಿಯಾಗಿ ಪರಿಶೀಲನೆ ಮಾಡದೇ ಪ್ರಮಾಣ ಪತ್ರ ಮಂಜೂರು ಮಾಡಿದವರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಶಿಷ್ಟ ಪಂಡಕ್ಕೆ ಸೇರಿರುವುದಾಗಿ ಕೃಷ್ಣ ಎಂಬುವವರು ಕೆ.ಎಸ್.ಆರ್.ಟಿ.ಸಿ. ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸೂಚನೆ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕೃಷ್ಣ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಸಿಂಧುತ್ವ ಪರಿಶೀಲನೆ ವೇಳೆ ಆತ ಸುಳ್ಳು ಮಾಹಿತಿ ನೀಡಿ ಪ್ರಮಾಣ ಪತ್ರ ಪಡೆದಿರುವುದು ಗೊತ್ತಾಗಿದೆ. ಹೀಗಾಗಿ, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನುಳಿದವರ ವಿರುದ್ಧ ಪ್ರಕರಣಕ್ಕೆ ಕಾರಣ
ಜಾತಿ ಪ್ರಮಾಣ ಪತ್ರ ನೀಡುವುದಕ್ಕೂ ಮುಂಚೆ ಸರಿಯಾಗಿ ಪರಿಶೀಲನೆ ನಡೆಸಿ ಮಂಜೂರು ಮಾಡಬೇಕು. ಆದರೆ, ಈ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿರುವುದರಿಂದಾಗಿ ಈ ಹಿಂದಿದ್ದ ತಹಸೀಲ್ದಾರರಾದ ಮಂಜುನಾಥ್, ಕೊಟ್ರೇಶ್ ಆರ್.ಐ ವಿಜಯಕುಮಾರ್ ಹಾಗೂ ವಿಎ ಸುರೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2013ರಲ್ಲಿ ಪ್ರಮಾಣ ಪತ್ರ ನೀಡಲಾಗಿತ್ತು.

https://www.suddikanaja.com/2021/07/12/fake-caste-certificate/

error: Content is protected !!