ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ‌ ನೀಡಿದ ಸರ್ಕಾರ, ಕಂದಾಯ ಇಲಾಖೆಯಲ್ಲಿ ಹುದ್ದೆಗಳು ಭರ್ಜರಿ ಖಾಲಿ,‌ ನಡೆಯಲಿದೆ ನೇಮಕಾತಿ

 

 

ಸುದ್ದಿ‌ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕೋವಿಡ್ ಹಿನ್ನೆಲೆ ನೇಮಕಾತಿ ಪ್ರಕ್ರಿಯೆಗೆ ಗ್ರಹಣ‌ ಹಿಡಿದಿತ್ತು. ಆದರೆ, ಈಗೀಗ ಸೋಂಕು‌ ಇಳಿಮುಖ ಆಗುತ್ತಿದೆ. ಇದರ ನಡುವೆಯೇ ರಾಜ್ಯ ಸರ್ಕಾರ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ನೀಡಿದೆ.

READ | ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್ ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಪೂರ್ಣ ಮಾಹಿತಿಗಾಗಿ ಕ್ಲಿಕ್ಕಿಸಿ

ಕಂದಾಯ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಯ ಬಗ್ಗೆ ಪಕ್ಕಾ‌ ಮಾಹಿತಿಯನ್ನು ಖುದ್ದು ಕಂದಾಯ ಸಚಿವರೇ ಬಹಿರಂಗ ಪಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ನೇಮಕಾತಿ ಪ್ರಕ್ರಿಯೆಯೂ ನಡೆಯಲಿದೆ.
ಎಲ್ಲೆಲ್ಲಿ ಎಷ್ಟು ಹುದ್ದೆಗಳು‌ ಖಾಲಿ ಪಟ್ಟಿ ಕೆಳಗಿದೆ
ಕಂದಾಯ ಇಲಾಖೆಯಲ್ಲಿ ತಹಸೀಲ್ದಾರ್ ಗ್ರೇಡ್‌ ಗೆ 127, ಶೀಲ್ದಾರ್ ಗ್ರೇಡ್ 2135, ಉಪ ತಹಸೀಲ್ದಾರ್ 160‌, ಎಅಪ್.ಡಿ.ಎ 492, ಎಸ್.ಡಿ.ಎ 1005,‌ವಿಎ (ಗ್ರಾಮ ಲೆಕ್ಕಾಧಿಕಾರಿಗಳು) 1792 ಹಾವಃ ಭೂಮಾಪಕರು 604 ಹುದ್ದೆಗಳು ಖಾಲಿ‌ ಇವೆ.
ಅದೇ ರೀತಿ, ನೋಂದಣಿ,‌ ಮುದ್ರಾಂಕ ಇಲಾಖೆಯಲ್ಲಿ‌ ಎಫ್.ಡಿ.ಎ 5 ಎಸ್.ಡಿ.ಎ 238, ಉಪ‌ ನೋಂದಣಾಧಿಕಾರಿ 17 ಈ‌ ಎಲ್ಲ‌ ಹುದ್ದೆಗಳು ಪ್ರಸ್ತುತ ಖಾಲಿ ಇವೆ. ಇವುಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಸಚಿವರು ತಿಳಿಸಿದ್ದಾರೆ. ಹುದ್ದೆಗಳ‌ ಭರ್ತಿ ಪ್ರಕ್ರಿಯೆ ಶೀಘ್ರ‌ ನಡೆಯುವ ಸಾಧ್ಯತೆ ಇದೆ.

https://www.suddikanaja.com/2021/09/16/koo-co-founder-aprameya-radhakrishna-gave-good-news-to-indian-talents-those-who-seeking-for-job/

error: Content is protected !!