ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನೀವು ಬೈಕ್, ಕಾರು, ಮಧ್ಯಮ, ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಅಥವಾ ಇನ್ನ್ಯಾವುದೇ ವಾಹನದ ಮಾಲೀಕರಾಗಿದ್ದೀರಾ? ಹಾಗಿದ್ದರೆ ಕೂಡಲೇ ನಂಬರ್ ಪ್ಲೇಟ್ ಬದಲಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಬೀಳಲಿದೆ ದಂಡ.
ಅತಿ ಸುರಕ್ಷಿತ ನೋಂದಣಿ ಫಲಕ(ಎಚ್.ಎಸ್.ಆರ್.ಪಿ-HSRP)ಗಳನ್ನು ಅಳವಡಿಸಿಕೊಳ್ಳಲೇಬೇಕು. ಅರ್ಜಿ ಸಲ್ಲಿಸಲು ನವೆಂಬರ್ 17 ಕೊನೆಯ ದಿನವಾಗಿದೆ.
READ | ಪರೀಕ್ಷೆ ಬರೆದ 48 ಗಂಟೆಯೊಳಗೆ ರಿಸಲ್ಟ್ ಪ್ರಕಟ, ದಾಖಲೆ ಬರೆದ ಕುವೆಂಪು ವಿವಿ
ಯಾರಿಗೆಲ್ಲ ದಂಡದಿಂದ ವಿನಾಯಿತಿ?
ಒಂದುವೇಳೆ, ಈಗಾಗಲೇ ಎಚ್.ಎಸ್.ರ್.ಪಿಗೆ ಶುಲ್ಕ ಪಾವತಿಸಿದ್ದಲ್ಲಿ ಅಂಥವರಿಗೆ ದಂಡದಿಂದ ವಿನಾಯಿತಿ ನೀಡಲಾಗುವುದು. ಅಳವಡಿಕೆಗೆ ನಿಗದಿಯಾದ ದಿನಾಂಕದಿಂದ ಒಂದು ತಿಂಗಳವರೆಗೆ ಮಾನ್ಯವಾಗಬಹುದಾದ ರಸೀದಿಯನ್ನು ಹೊಂದಿದ್ದರೆ ಸಾಕು.
ಎಲ್ಲೆಲ್ಲಿ ಪ್ಲೇಟ್ ಅಳವಡಿಕೆ?
ವಾಹನ ಮಾಲೀಕರ ಮನೆ ವಿಳಾಸಕ್ಕೆ ಬಂದು ಅಳವಡಿಸುವ ಅವಕಾಶವಿದೆ. ಅಥವಾ ಮನೆ ಸಮೀಪದ ಸ್ಥಳವನ್ನು ಎಚ್.ಎಸ್.ಆರ್.ಪಿ ಅಳವಡಿಕೆಗಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಅಳವಡಿಸುವುದು ಹೇಗೆ?
https://transport.karnataka.gov.in/ ಅಥವಾ https://www.siam.in/ ಜಾಲತಾಣಕ್ಕೆ ಭೇಟಿ ಮಾಡಿ ಅಲ್ಲಿ ಬುಕ್ ಎಚ್.ಎಸ್.ಆರ್.ಪಿ ಮೇಲೆ ಕ್ಲಿಕ್ ಮಾಡಬೇಕು. ಅಥವಾ ಬುಕ್ ಮೈ ಎಚ್.ಎಸ್.ಆರ್‍ಪಿ ( https://bookmyhsrp.com/ )ಎಂದು ಗೂಗಲ್ ನಲ್ಲಿ ನಮೂದಿಸಿ ಅಲ್ಲಿ ವಾಹನದ ಮಾಹಿತಿಯನ್ನು ನಮೂದಿಸಿದರೆ ಸಾಕು. ಶೆಡ್ಯೂಲ್ ಕೇಳುತ್ತದೆ. ಅದಕ್ಕೆ ನಿಮ್ಮ ಅನುಕೂಲದ ದಿನಾಂಕ ನೀಡಿ, ಡೀಲರ್ ಗಳನ್ನು ಬುಕ್ ಮಾಡಬೇಕು. ಆನ್ ಲೈನ್ ಮೂಲಕ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
ಮಾಡಿಸದಿದ್ದರೆ ಏನು ಸಮಸ್ಯೆ?
ಒಂದು ದಂಡ ಬೀಳುತ್ತದೆ. ಅದರೊಂದಿಗೆ ವಾಹನಗಳ ಮಾಲೀಕತ್ವ ಬದಲಾವಣೆ, ವಿಳಾಸ ವರ್ಗಾವಣೆ, ಕಂತು ಕರಾರು ನಮೂದು, ರದ್ದತಿ, ಅರ್ಹತಾ ಪತ್ರ ನವೀಕರಣ ಸೇವೆಗೆ ಅವಕಾಶ ಇರುವುದಿಲ್ಲ.
CLICK HERE FOR Government Order