ಕನ್ನಡಿಗರಿಗೆ ಬೇಡವಾದ ‘ಹಿಂದಿ ದಿವಸ್’ ಏಕೆ ಬೇಕು, ‘ಸುದ್ದಿ ಕಣಜ’ ಪೋಲ್ ನಲ್ಲಿ ಓದುಗರೇನು ಹೇಳಿದರು?

 

 

ಸುದ್ದಿ ಕಣಜ.ಕಾಂ | KARNTAKA | HINIDI DIWAS
ಶಿವಮೊಗ್ಗ: ‘ಹಿಂದಿ ದಿವಸ್’ ಆಚರಣೆಯ ಬಗ್ಗೆ ಕನ್ನಡಿಗರು ದನಿ ಎತ್ತಿದ್ದಾರೆ. ಅವರ ಧ್ವನಿ ಧ್ವನಿಯಾಗಬೇಕು ಎಂಬ ಉದ್ದೇಶಕ್ಕೆ ‘ಸುದ್ದಿ ಕಣಜ.ಕಾಂ’ ವೀವರ್ಸ್ ಪೋಲ್ ಮಾಡಿದ್ದು, ಅದರಲ್ಲಿ ಶೇ.65.1ರಷ್ಟು ಓದುಗರು ‘ಹಿಂದಿ ದಿವಸ್’ ಆಚರಣೆಯನ್ನು ವಿರೋಧಿಸಿದ್ದಾರೆ. ಶೇ.34.9ರಷ್ಟು ಬೇಕು ಎಂಬ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

pole
‘ಸುದ್ದಿ ಕಣಜ’ ನಡೆಸಿದ ವೀವರ್ಸ್ ಚಾಯಿಸ್ ಪೋಲ್ ಫಲಿತಾಂಶ.

ಬಹುಸಂಖ್ಯಾತರಿಗೆ ಬೇಡವಾಗಿರುವ ಈ ದಿನಾಚರಣೆಯನ್ನು ಕೈಬಿಡಬೇಕು ಎನ್ನುವುದು ಕನ್ನಡಿಗರ ಪ್ರಬಲ ವಾದವಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಕನ್ನಡದ ಅಸ್ಮಿತೆ ಸಂಕಷ್ಟದಲ್ಲಿದೆ. ರಾಜ್ಯದ ರಾಜಧಾನಿಯಲ್ಲಿ ಕನ್ನಡಿಗರಿಗಿಂತ ಅನ್ಯಭಾಷಿಗರ ಸಂಖ್ಯೆಯೇ ಹೆಚ್ಚಿದೆ.
ಭಾಷಾ ರಕ್ಷಣೆಗಾಗಿ ನಿರಂತರ ದನಿ ಎತ್ತಲಾಗುತ್ತಿದೆ. ಆದರೆ, ಅದಕ್ಕೆ ಮಾನ್ಯತೆ ಇದುವರೆಗೂ ಸಿಕ್ಕಿಲ್ಲ. ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಣೆ ಮಾಡಲಾಗುತ್ತಿದ್ದು, ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಕರಾಳ ದಿನ ಎಂದು ಆಚರಣೆ ಮಾಡುತ್ತಿದೆ. ಟ್ವಿಟರ್ ನಲ್ಲಿ ಹಿಂದಿ ಹೇರಿಕೆ ನಿಲ್ಲಿಸಿ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನವನ್ನೇ ಮಾಡಲಾಗಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಇದರ ಬಗ್ಗೆ ಗಮನಹರಿಸಿಲ್ಲ.

https://www.suddikanaja.com/2021/08/15/first-independent-village-issuru-movement/

error: Content is protected !!