KUVEMPU UNIVERSITY | ಕುವೆಂಪು ವಿಶ್ವವಿದ್ಯಾಲಯದ 31ನೇ ವಾರ್ಷಿಕ ಘಟಿಕೋತ್ಸವ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಕೆ

 

 

ಸುದ್ದಿ ಕಣಜ.ಕಾಂ | DISTRICT | EDUCATION
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 31ನೇ ವಾರ್ಷಿಕ ಘಟಿಕೋತ್ಸವವು ಅಕ್ಟೋಬರ್-2021ರಲ್ಲಿ ಜರುಗಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://www.suddikanaja.com/2021/07/28/kuvempu-university-evaluation-registrar-transfer/

ಅಕ್ಟೋಬರ್, ನವೆಂಬರ್ 2019ರ ನಂತರದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ರೆಗ್ಯೂಲರ್ ನ ವಿವಿಧ ಸ್ನಾತಕ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಪಿಎಚ್.ಡಿ., ಪಡೆದವರು ಹಾಗೂ ಪಿಎಚ್.ಡಿ.  ಪದವಿಯ ಅರ್ಹ ಅಭ್ಯರ್ಥಿಗಳು ಮತ್ತು ದೂರಶಿಕ್ಷಣದ ಮೂಲಕ ಫೆಬ್ರವರಿ-2020ರಲ್ಲಿ ನಡೆದ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಹಾಗೂ ಪಿಎಚ್.ಡಿ. ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು.
ಅರ್ಜಿಯನ್ನು ನೇರವಾಗಿ ಆನ್‍ಲೈನ್‍ನಲ್ಲಿ ವಿಶ್ವವಿದ್ಯಾಲಯದ ವೆಬ್‍ಸೈಟ್   www.kuvempur.ac.in  ಮೂಲಕ ಸಲ್ಲಿಸಬಹುದಾಗಿದೆ. ಈ ಕುರಿತು ವಿವರ ಹಾಗೂ ನಿಗದಿತ ಶುಲ್ಕ ಮತ್ತು ಇತರೆ ಮಾಹಿತಿಗಳಿಗೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್‍ಸೈಟ್‍ನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸ್ನಾತಕ ಪದವಿ(ರೆಗ್ಯೂಲರ್)-7022254997, ಸ್ನಾತಕೋತ್ತರ ಪದವಿ/ವೃತ್ತಿಪರ ಕೋರ್ಸ್ (ರೆಗ್ಯೂಲರ್) 7022254993, ದೂರಶಿಕ್ಷಣ 7022255891, ತಾಂತ್ರಿಕ ಸಹಾಯಕ್ಕಾಗಿ 7022255745, 8183098136,  8183098138 ಅಥವಾ ಇಮೇಲ್ kusconvo@gmail.com  ಮೂಲಕ ಸಂಪರ್ಕಿಸಬಹುದಾಗಿದೆ.

https://www.suddikanaja.com/2020/11/29/cm-announced-1-crore-to-kuvempu-university/

error: Content is protected !!