ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ವ್ಯಕ್ತಿಯೊಬ್ಬರಿಗೆ ಕಸ್ಟಮರ್ ಕೇರ್ (customer care) ಸೋಗಿನಲ್ಲಿ ಕರೆ ಮಾಡಿ ₹1,05,400 ಮೋಸ ಮಾಡಿರುವ ಘಟನೆ ನಡೆದಿದೆ.
ಪೇಟಿಎಂ (paytm) ಖಾತೆಯ ಮೂಲಕ ಮೊಬೈಲ್ ನಂಬರ್ ಗೆ ₹198 ರೀಚಾರ್ಜ್ ಮಾಡಲು ಪ್ರಯತ್ನಿಸಿದ್ದು, ರೀಚಾರ್ಜ್ ಫೇಲ್ ಆಗಿದೆ. ಗೂಗಲ್ ನಲ್ಲಿ ಪೇಟಿಎಂ ಕಸ್ಟಮರ್ ಕೇರ್ (paytm customer care) ನಂಬರ್ ಗೆ ಕರೆ ಮಾಡಲಾಗಿದೆ. ನಂತರ, ಅದೇ ದಿನ ಅಪರಿಚಿತ ನಂಬರ್ ನಿಂದ ಕರೆ ಬಂದಿದ್ದು, ಪೇಟಿಎಂ ಕಸ್ಟಮರ್ ಕೇರ್ ನವರೆಂದು ಪರಿಚಯಿಸಿಕೊಂಡಿದ್ದಾರೆ.
READ | ಮುದ್ರಾ ಯೋಜನೆ ಅಡಿ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ
OTP ಪಡೆದು ಮೋಸ ಮಾಡಿದ ವ್ಯಕ್ತಿ
ನಂತರ, ಮೊಬೈಲ್ ನಲ್ಲಿ ಎನಿಡೆಸ್ಕ್ (anydesk) ಇನ್ ಸ್ಟಾಲ್ ಮಾಡುವಂತೆ ಸೂಚಿಸಿದ್ದಾರೆ. ಎನಿಡೆಸ್ಕ್ ಕೋಡ್ ಅವರಿಗೆ ತಿಳಿಸಿದ ನಂತರ ಒಟಿಪಿ (OTP) ತಿಳಿಸುವಂತೆ ಹೇಳಿದ್ದಾರೆ. ತದನಂತರ, ಹಂತಹಂತವಾಗಿ ಖಾತೆಯಿಂದ ₹5,000, ₹25,000, ₹20,000, ₹25,000 ಹಾಗೂ ₹5,400 ರೂಪಾಯಿ ಕ್ರಮವಾಗಿ ಕಡಿತಗೊಂಡಿದೆ. ಒಟ್ಟು ₹1,05,400 ರೂ. ವರ್ಗಾಯಿಸಿಕೊಂಡು ವಂಚನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ. ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸ್ಟಮರ್ ಸರ್ವಿಸ್ ಪಾಯಿಂಟ್ ಕೊಡಿಸುವುದಾಗಿ 60,500 ರೂ. ಟೋಪಿ, ಮೋಸ ಹೋಗಿದ್ದು ಹೇಗೆ ಗೊತ್ತಾ?