ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ, ಶಿಕಾರಿಪುರ, ಸಾಗರದಲ್ಲಿ ನೂರರ ಗಡಿ ದಾಟಿರುವ ಕೊರೊನಾ ಸೋಂಕು ಶಿವಮೊಗ್ಗದಲ್ಲಿ ದ್ವಿಶತಕ ದಾಟಿದೆ.
ಶಿಕಾರಿಪುರದಲ್ಲಿ ಕಳೆದ ಕೆಲವು ದಿನಗಳಿಂದ ನೂರರೊಳಗೆ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ, ಶುಕ್ರವಾರ ಸಾಗರ, ಶಿಕಾರಿಪುಯರದಲ್ಲಿ ಮತ್ತೆ ಸೋಂಕು ಉಲ್ಬಣಗೊಂಡಿದೆ.
https://www.suddikanaja.com/2021/05/28/lock-down-to-control-corona-virus/
ಇಂದು 694 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 35 ವಿದ್ಯಾರ್ಥಿಗಳು ಹಾಗೂ 5 ಸಿಬ್ಬಂದಿ ಇದ್ದಾರೆ. ಚಿಕಿತ್ಸೆ ಪಡೆದು 740 ಮಂದಿ ಗುಣಮುಖರಾಗಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 211, ಭದ್ರಾವತಿ 122, ತೀರ್ಥಹಳ್ಳಿ 48, ಶಿಕಾರಿಪುರ 114, ಸಾಗರ 115, ಹೊಸನಗರ 17, ಸೊರಬ 49, ಹೊರ ಜಿಲ್ಲೆಯ 18 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಏಳು ಜನ ಮೃತಪಟ್ಟಿದ್ದಾರೆ.
ಎಲ್ಲಿ ಎಷ್ಟು ಜನ ಸೋಂಕಿತರು | ಶುಕ್ರವಾರದ 3,523 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಕಳೆದ ಮಾದರಿಗಳು ಸೇರಿ ಇಂದು ಬಿಡುಗಡೆ ಮಾಡಿರುವುದರಲ್ಲಿ 2,.643 ಜನರ ವರದಿ ನೆಗೆಟಿವ್ ಇದೆ. ಜಿಲ್ಲೆಯಲ್ಲಿ 6,900 ಸಕ್ರಿಯ ಪ್ರಕರಣಗಳಿವೆ. ಕೋವಿಡ್ ವಾರ್ಡ್ ನಲ್ಲಿ 610, ಡಿಸಿಎಚ್ಸಿನಲ್ಲಿ 358, ಕೋವಿಡ್ ಕೇರ್ ಸೆಂಟರ್ ನಲ್ಲಿ 1,759, ಖಾಸಗಿ ಆಸ್ಪತ್ರೆಯಲ್ಲಿ 1,512, ಹೋಂ ಐಸೋಲೇಷನ್ನಲ್ಲಿ ಹಾಗೂ ಟ್ರಿಯೇಜ್ನಲ್ಲಿ 690 ಜನರಿದ್ದಾರೆ.
https://www.suddikanaja.com/2021/05/18/covid-cases-in-shivamogga-4/