ಸುದ್ದಿ ಕಣಜ.ಕಾಂ | KARNATAKA | VIRAL NEWS
ಚಿಕ್ಕಮಗಳೂರು: ವಿಶ್ವದ ವೇಗ ಓಟಗಾರ ಉಸೇನ್ ಬೋಲ್ಟ್ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಳ್ಳೋಡಿಗೆ ಆಗಮಿಸಲಿದ್ದಾರಂತೆ!
https://www.suddikanaja.com/2021/01/17/bollywood-actress-jacqueline-fernandez-visit-shivamogga-kimmane-golf-resort/
ಅದೂ ಮುಳ್ಳೋಡಿಯಲ್ಲಿನ ಕೆಸರು ಗದ್ದೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು. ಇಂತಹದ್ದೊಂದು ಪೋಸ್ಟ್ ಕಾಫಿನಾಡಿನಲ್ಲಿ ವೈರಲ್ ಆಗಿದೆ.
ಹಿಂದೆ ಕೆಸರು ಗದ್ದೆ ಅದರ ಮುಂದೆ ಉಸೇನ್ ಬೋಲ್ಟ್ ಅವರ ಚಿತ್ರವಿದೆ. ಅದರಲ್ಲಿ ‘ಉಸೇನ್ ಬೋಲ್ಟ್ ಬರಲಿದ್ದು, ಈಗಾಗಲೇ ತರಬೇತಿಯನ್ನು ಆರಂಭಿಸಿದ್ದಾರೆ’ ಎಂದು ಬರೆಯಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
ವ್ಯವಸ್ಥೆಯ ವಿರುದ್ಧ ವಿನೂತನ ಅಣಕು
ಮುಳ್ಳೋಡಿ ರಸ್ತೆ ಹಾಳಾಗಿ ಹಲವು ವರ್ಷಗಳೇ ಗತಿಸಿವೆ. ಅದರ ರಿಪೇರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಪ್ಪಿತಪ್ಪಿ ಅಲ್ಲಿ ವಾಹನ ಚಲಾಯಿಸಿದರೆ ಕೆಸರಿನಲ್ಲಿ ಬೀಳುವುದು ಗ್ಯಾರಂಟಿ. ಈ ಕುಗ್ರಾಮದ ಸಮಸ್ಯೆಯನ್ನು ಪರಿಹರಿಸುವಲ್ಲಿ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಅವರ ಕಾಲೆಳೆಯುವುದಕ್ಕಾಗಿ ಸ್ಥಳೀಯರು ಉಸೇನ್ ಬೋಲ್ಟ್ ಬರಲಿದ್ದಾರೆ ಎಂಬ ಪೋಸ್ಟಿನ ಮಾರ್ಗವನ್ನು ಬಳಸಿಕೊಂಡಿದ್ದಾರೆ. ಸ್ಥಳೀಯ ಸಮಸ್ಯೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಸ್ತೆಯ ಸ್ಥಿತಿಯನ್ನು ಕಂಡು ಜನರು ಸಹ ಆಡಳಿತ ವರ್ಗವನ್ನು ಜಾಲತಾಣದಲ್ಲಿಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತಿದ್ದಾರೆ. ಅಧಿಕಾರಿ ವರ್ಗ ಇದರೆಡೆಗೆ ಗಮನಹರಿಸಿ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
https://www.suddikanaja.com/2021/01/14/rashtrakutas-sculpture-found-in-shiralakoppa/