ಅತ್ಯಾಚಾರದ ವಿರುದ್ಧ 35,000 ಕಿ.ಮೀ. ಸೈಕಲ್ ಯಾತ್ರೆ, ನಾಳೆ ಶಿವಮೊಗ್ಗಕ್ಕೆ ಬರಲಿದ್ದಾರೆ ಕಿರಣ್, ಕಾರಣವೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ದೇಶದ ಯಾವುದೇ ಮೂಲೆಯಲ್ಲಿ ಅತ್ಯಾಚಾರ ನಡೆಯಲಿ ಎಲ್ಲರ ರಕ್ತ ಕುದಿಯಲಾರಂಭಿಸುತ್ತದೆ. ಹೋರಾಟಗಳು ಮೊಳಗುತ್ತವೆ. ಆದರೆ, ಇಲ್ಲೊಬ್ಬರು ಇವರೆಲ್ಲರಿಗಿಂತ ಭಿನ್ನವಾದ ದಾರಿಯನ್ನು ಆಯ್ಕೆ ಮಾಡಿದ್ದಾರೆ.
ಸೈಕಲ್ ಮುಂದೆ `ಅತ್ಯಾಚಾರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಲೇಬೇಕು. ಅಖಂಡ ಕರ್ನಾಟಕ ಸ್ಕೈಕ್ಲಿಂಗ್’ ಎಂಬ ಬೋರ್ಡ್ ಅಳವಡಿಸಿಕೊಂಡು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸೈಕಲ್ ನಲ್ಲೇ ಯಾತ್ರೆ ಮಾಡುವ ದೃಢ ಸಂಕಲ್ಪ ಮಾಡಿದ್ದಾರೆ.

ಬೆಂಗಳೂರಿನ ಬನ್ನೇರುಘಟ್ಟದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ವಿ.ಕಿರಣ್ ಕುಮಾರ್ ಅವರೇ ಈ ಸಂಕಲ್ಪದೊಂದಿಗೆ ಸೈಕಲ್ ಹತ್ತಿದ ಛಲಗಾರ. ಈಗಾಗಲೇ ಹಲವು ಜಿಲ್ಲೆಗಳನ್ನು ದಾಟಿ ಅಕ್ಟೋಬರ್ 11ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.

ಜಿಲ್ಲಾ ಯುವ ಕಾಂಗ್ರೆಸ್ ಸಪೋರ್ಟ್
ಬೆಳಗ್ಗೆ 11 ಗಂಟೆಗೆ ನಗರದ ಮಹಾವೀರ ವೃತ ದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಂಕೇತಿಕವಾಗಿ ನಡಿಗೆ ಹೊರಟು ಕಿರಣ್ ಅವರ ಸೈಕಲ್ ಯಾತ್ರೆಗೆ ಜಿಲ್ಲಾ ಯುವ ಕಾಂಗ್ರೆಸ್ ಬೆಂಬಲ ನೀಡಲಿದೆ. ಶಿವಮೊಗ್ಗಕ್ಕೆ ಆಗಮಿಸಲಿರುವ ಕಿರಣ್ ಅವರು ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ.
ಅತ್ಯಾಚಾರದ ವಿರುದ್ಧ ಏಕಾಂಗಿ ಹೋರಾಟ
ಬಡಕಲು ದೇಹ ಸೈಕಲ್ ಮುಂದೊಂದು ಬೋರ್ಡ್, ಹಿಂದೆ ಕನ್ನಡದ ಬಾವುಟ ಹಾಕಿಕೊಂಡು ಅತ್ಯಾಚಾರದ ವಿರುದ್ಧ ಏಕಾಂಗಿ ಹೋರಾಟಕ್ಕೆ ಇಳಿದಿದ್ದಾರೆ.
ಕಿರಣ್ ಅವರು ಆಗಸ್ಟ್ 22ರಂದು ಬೆಂಗಳೂರಿನ ಬನ್ನೇಘಟ್ಟದಿಂದ ಸೈಕಲ್ ಯಾತ್ರೆಯನ್ನು ಆರಂಭಿಸಿದ್ದು, ಒಟ್ಟು 3,500 ಕಿ.ಮೀ. ಸಂಚರಿಸುವ ಗುರಿ ಹೊಂದಿದ್ದಾರೆ.

https://www.suddikanaja.com/2021/03/13/kpcc-president-dk-shivakumar-furious-reaction-to-bjp/

error: Content is protected !!