ಯದ್ವಾತದ್ವ ಆಟೋ ಚಲಾಯಿಸಿ ಭೀತಿ ಹುಟ್ಟಿಸಿದ ನಾಲ್ವರು ಅರೆಸ್ಟ್

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ಆಟೋಗಳನ್ನು ಯದ್ವಾತದ್ವ ಚಲಾಯಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದಾರೆ ಎನ್ನಲಾದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಇಕ್ಕೇರಿಯ ಅಘೋರೇಶ್ವರ ದೇವಸ್ಥಾನದ ಮುಂದೆ ಆಟೋಗಳನ್ನು ಯದ್ವಾತದ್ವ ಓಡಿಸಿದ್ದು, ಈ ಬಗ್ಗೆ ದಾಖಲಾದ ದೂರಿನನ್ವಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಚಾಲಕರಾದ ಅರ್ಜನ್, ಅರ್ಫತ್, ವಾಹನದಲ್ಲಿದ್ದ ಅಬ್ದುಲ್ ತೌಫಿಕ್, ಅಕ್ಮಲ್ ಖಾನ್ ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ದೇವಸ್ಥಾನದ ಮುಂದೆ ಅತಿರೇಕದಿಂದ ಆಟೋಗಳನ್ನು ಓಡಿಸಿದ್ದು, ಧಾರ್ಮಿಕ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!