ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಬೈಕ್ ನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಹಳೇ ನಗರ ಪೊಲೀಸರು ಸೋಮವಾರ ಬಂಧಿಸಿ, ಅವರಿಂದ ₹1.36 ಲಕ್ಷ ಮೌಲ್ಯದ ಒಣ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಹಳೆ ಸೀಗೇಬಾಗಿಯ ಲೇಔಟ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಭದ್ರಾವತಿಯ ನಿವಾಸಿಗಳಾದ ಅಸಾದುಲ್ಲಾ (25) ಹಾಗೂ ಮಹ್ಮದ್ ಜರೀಸ್ (25) ಅವರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಭದ್ರಾವತಿ ನಗರ ವೃತ್ತ ಸಿಪಿಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸ್ ಮೂಲಗಳು ಪ್ರಕಾರ, ಅಂದಾಜು ₹1.36 ಲಕ್ಷ ಮೌಲ್ಯದ 3 ಕೆಜಿ 555 ಗ್ರಾಂ ಒಣ ಗಾಂಜಾ, ₹1,000 ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದ್ದಾರೆ.