ಕೋಲ್ ಫೀಲ್ಡ್ ನಲ್ಲಿ ಉದ್ಯೋಗ ಅವಕಾಶ, ವಿದ್ಯಾರ್ಹತೆ, ಕೊನೆಯ ದಿನಾಂಕ ಮಾಹಿತಿಗಾಗಿ ಓದಿ

 

 

ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ಕೇಂದ್ರ ಸರ್ಕಾರದ ಪಶ್ಚಿಮ ಕೋಲ್ ಫೀಲ್ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಕ್ಟೋಬರ್ 21ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಆಸಕ್ತರು ನವೆಂಬರ್ 21ರಂದು ಸಂಜೆ 5 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.
ಮೈನಿಂಗ್ ಸಿರ್ದಾರ್ ಮತ್ತು ಸರ್ವೇಯರ್ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ವಿದ್ಯಾರ್ಹತೆ

ಮೈನಿಂಗ್ ರಿರ್ದಾರ್ ಹುದ್ದೆಗೆ ಅಭ್ಯರ್ಥಿಗಳು ಸಿರ್ದಾರ್ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಉತ್ತೀರ್ಣ ರಾಗಿರತಕ್ಕದ್ದು. ಅದೇ ರೀತಿ, ಸರ್ವೇಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಮೆಟ್ರಿಕ್ಯುಲೇಷನ್ ಜತೆಗೆ ಸರ್ವೇಯರ್ ಸರ್ಟಿಫಿಕೇಟ್ ಪಡೆದಿರಬೇಕು. ಇಲ್ಲವೇ ಸರ್ವೇಯಿಂಗ್ ನಲ್ಲಿ ಡಿಪ್ಲೋಮಾ ಉತ್ತೀರ್ಣರಾಗಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕನಿಷ್ಠ 18, ಗರಿಷ್ಠ 30 ವರ್ಷದೊಳಗಿನವರು ಅರ್ಜಿಗಳನ್ನು ಸಲ್ಲಿಸಬಹುದು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿಗೆ 3 ವರ್ಷ ಸಡಿಲಿಕೆ ಇದೆ.

ಹುದ್ದೆಯ ಹೆಸರು ಹುದ್ದೆಗಳು
ಮೈನಿಂಗ್ ಸಿರ್ದಾರ್ ಟಿ ಆಂಡ್ ಎಸ್ ಗ್ರೇಡ್-ಸಿ 167
ಸರ್ವೇಯರ್ (ಮೈನಿಂಗ್) ಟಿ ಆಂಡ್ ಎಸ್ ಗ್ರೇಡ್-ಬಿ 44

NOTIFICATION

WEBSITE

https://www.suddikanaja.com/2021/01/17/jobs-in-kptcl-for-diploma-engineering-graduates/

error: Content is protected !!