ಕಿಡ್ನ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟವರ ವಿರುದ್ಧ ದಾಖಲಾಯ್ತು ಎಫ್.ಐ.ಆರ್.

 

 

ಸುದ್ದಿ‌ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಹಣಕ್ಕಾಗಿ ಬೇಡಿಕೆ ಇಟ್ಟು ಕೊಡದಿದ್ದಾಗ ಕಿಡ್ನ್ಯಾಪ್ ಮಾಡಿರುವ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಮನೆ ನಾಲ್ಕನೇ ಕ್ರಾಸ್ ನಿವಾಸಿ ಆರ್.ರಘು (33) ಎಂಬಾತನನ್ನು ಆಗುಂಬೆಗೆ ಕರೆದೊಯ್ದು ಹಲ್ಲೆ ಮಾಡಲಾಗಿದೆ. ಚಿನ್ನಾಭರಣ, ಮೊಬೈಲ್ ಸೇರಿ‌ ಒಟ್ಟು ಒಂದೂವರೆ ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಕಸಿದುಕೊಂಡು ಅಲ್ಲಿಯೇ ಬಿಡಲಾಗಿದೆ. ಗಾಯಗೊಂಡ ರಘು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆದಿದ್ದಾರೆ.
ಯಾರ ಮೇಲೆ ದೂರು?
ಶಿವಮೊಗ್ಗದ ಶಿವಕುಮಾರ್, ನೂತನ್ ಹಾಗೂ ಪ್ರವೀಣ್ ಎಂಬುವವರ ವಿರುದ್ಧ ರಘು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಎನ್.ಜಿ.ಒ. ಆರಂಭಿಸುವುದಕ್ಕಾಗಿ ರಘು ಅವರನ್ನು ₹ 2 ಲಕ್ಷ‌ ಕೊಡುವಂತೆ ಶಿವಕುಮಾರ್ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಿವುದಕ್ಕೆ ನಿರಾಕರಿಸಿದ್ದಾರೆ ಎಂಬ ಕಾರಣಕ್ಕೆ ಫೋನ್ ಮಾಡಿ ರಘು ಅವರನ್ನು ಶಿವಮೊಗ್ಗ ನಗರದ ಸ್ಥಳವೊಂದಕ್ಕೆ ಕರೆಸಲಾಗಿದೆ. ಅಲ್ಲಿಂದ ಆಗುಂಬೆಯಲ್ಲಿರುವ ಗೆಸ್ಟ್ ಹೌಸ್ ಗೆ ಕರೆದೊಯ್ದು ಥಳಿಸಿ ಸಾಮಗ್ರಿಗಳನ್ನು ಕಸಿದುಕೊಂಡು ₹50 ಲಕ್ಷಕ್ಕೆ ಬೇಡಿಕೆ ಇಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

https://www.suddikanaja.com/2021/08/20/case-against-jog-security-guards/

error: Content is protected !!