ಬಟ್ಟೆ ಗಲೀಜಾದರೆ ಶಿಕ್ಷಕರ ಬೈಗುಳ, ಮಕ್ಕಳಿಗೆ ತಪ್ಪದ ನಿತ್ಯ ಸಂಕಟ, ಇದು ಮಲೆನಾಡಿನ ಹಳ್ಳಿಯೊಂದರೆ ವ್ಯಥೆ

 

 

ಸುದ್ದಿ ಕಣಜ.ಕಾಂ | TALUK | CITIZEN VOICE
ಶಿವಮೊಗ್ಗ: ಒಂದೆಡೆ ಸ್ಮಾರ್ಟ್ ಆಗುತ್ತಿರುವ ಶಿವಮೊಗ್ಗ ಸಿಟಿ, ಮತ್ತೊಂದೆಡೆ ರಸ್ತೆಯೇ ಇಲ್ಲದ ಹಳ್ಳಿಗಳು. ಈ ಅಸಮಾನತೆಯ ನಡುವೆ ಗ್ರಾಮೀಣ ಪ್ರದೇಶದ ಜನ ಕಷ್ಟಪಡುತಿದ್ದಾರೆ. ವಿದ್ಯಾರ್ಥಿಗಳು ಜಾರಿ ಬಿದ್ದು ಶಾಲೆಗೆ ಗಲೀಜು ಬಟ್ಟೆಯಲ್ಲೇ ಹೋಗುವ ಸ್ಥಿತಿ ಇದೆ.
ಇದು ಅಭಿವೃದ್ಧಿಶೀಲ ಶಿವಮೊಗ್ಗ ತಾಲೂಕಿನ ಸಿರಿಗೆರೆ ಗ್ರಾಮದ ರಸ್ತೆಯೊಂದರ ಚಿತ್ರಣ. ಸಿರಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೇಶಂಕರ ಎಸ್.ಎಫ್ ಕೆರೆಹಳ್ಳಿಯ ಹಣಗೆರೆಯಿಂದ ಕೆರೆಹಳ್ಳಿಗೆ ಹೋಗುವ ಸುಮಾರು ಎರಡು ಕಿಲೋ ಮೀಟರ್ ರಸ್ತೆ ಕೆಸರುಗದ್ದೆಯಾಗಿದೆ.
ಶರಾವತಿ ಮುಳುಗಡೆ ಸಂತ್ರಸ್ತರು ಇಲ್ಲಿ ವಾಸವಾಗಿದ್ದು, ಸರ್ಕಾರ ಇನ್ನೂ ಮೂಲಸೌಲಭ್ಯ ಕಲ್ಪಿಸಿಲ್ಲ. ಸ್ಥಳೀಯರು ಇಲ್ಲಿ ಸಂಚರಿಸುವುದು, ಮಕ್ಕಳು ಶಾಲೆಗೆ ಹೋಗುವುದು ವಾಹನ ಸಂಚಾರ ದುಸ್ತರವಾಗಿದೆ.

Sirigere Road 1 1
ಹಣಗೆರೆಯಿಂದ ಕೆರೆಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರು ಗದ್ದೆ ಆಗಿರುವುದು. ಅದರಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ.

ಎಷ್ಟೇ ಮನವಿ ಮಾಡಿದರೂ ಪ್ರಯೋಜನ ಶೂನ್ಯ
ರಸ್ತೆ‌ ಸಮಸ್ಯೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ, ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಗಮನ ಹರಿಸಿಲ್ಲ. ಕೂಡಲೇ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಾಳೆ ಗಿಡ ನೆಟ್ಟು ಪ್ರತಿಭಟನೆ
ಸ್ಥಳೀಯರಾದ ಸಂದೀಪ್ ಸೋಗೆಡ್, ಸುನೀಲ್, ಸೋಗೆದ್, ದೀಪಕ್ ಕೂಡಲಕೊಪ್ಪ, ಸರೋಜಾ ಮುಂತಾದವರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನೀವು ಇರುವಲ್ಲಿ ರಸ್ತೆ, ಚರಂಡಿ, ತ್ಯಾಜ್ಯ ವಿಲೇವಾರಿ‌ ಇತ್ಯಾದಿ ಮೂಲಸೌಕರ್ಯಗಳ ಬಗ್ಗೆ ಸಮಸ್ಯೆ ಇದೆಯೇ ಹಾಗಾದರೆ, ನಮ್ಮ ಗಮನಕ್ಕೆ ತನ್ನಿ. ಅದನ್ನು ಆಡಳಿತಕ್ಕೆ ತಲುಪಿಸುವುದು ‘ಸುದ್ದಿ ಕಣಜ’ದ ಜವಾಬ್ದಾರಿ. ಸಮಸ್ಯೆಯ ಬಗ್ಗೆ ಒಂದೆರಡು ಚಿತ್ರಗಳಿರಲಿ, ಸಮಸ್ಯೆ ಏನೆಂದು ಬರೆದು ನಮ್ಮ ವಾಟ್ಸಾಪ್ ಸಂಖ್ಯೆಗೆ 9483130291ಗೆ ಕಳುಹಿಸಿ.

 

https://www.suddikanaja.com/2021/06/19/smart-city-works-in-shivamogga/

error: Content is protected !!