ಶಿವಮೊಗ್ಗ ವಿಮಾನ ನಿಲ್ದಾಣ ಟರ್ಮಿನಲ್, ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗದ ಬಗ್ಗೆ ನಡೀತು ಪ್ರಮುಖ ಮೀಟಿಂಗ್, ಏನೇ‌ನು ಚರ್ಚೆ?

 

 

ಸುದ್ದಿ ಕಣಜ.ಕಾಂ | DISTRICT | SHIVAMOGGA AIRPORT
ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರದಲ್ಲಿ ಮಂಗಳವಾರ‌ ಪ್ರಮುಖ ಸಭೆಯೊಂದು ನಡೆದಿದೆ. ಅದರಲ್ಲಿ‌ ಶಿವಮೊಗ್ಗ‌ ವಿಮಾನ‌ ನಿಲ್ದಾಣ, ರೈಲ್ವೆ ಮಾರ್ಗ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ.

READ | ಕಾರುಗಳನ್ನು ಬಾಡಿಗೆ ನೀಡುವ ಮುನ್ನ ಹುಷಾರ್! ಬಾಡಿಗೆ ಪಡೆದ 3 ಕಾರುಗಳೊಂದಿಗೆ ಪರಾರಿಯಾಗಿದ್ದ ವ್ಯಕ್ತಿ ಅರೆಸ್ಟ್

ರಾಣೆಬೆನ್ನೂರು- ಶಿಕಾರಿಪುರ- ಶಿವಮೊಗ್ಗವರೆಗಿನ‌ ನೂತನ ರೈಲ್ವೆ ಮಾರ್ಗದಲ್ಲಿ ಆಗಮಿಸಿ ಪರಿಶೀಲನೆ ನಡೆಸಿದರು.
ಈ ಯೋಜನೆಗೆ ಬೇಕಾದ ಮಾಹಿತಿ, ಭೂ ಸ್ವಾಧೀನ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಂಸದರ ಅಧ್ಯಕ್ಷತೆಯಲ್ಲಿ ಸಭೆ ನೆಡೆಸಿ ದೀರ್ಘ ಸಮಾಲೋಚನೆ ಮಾಡಿದರು. ಶೀಘ್ರವಾಗಿ ಸಮಸ್ಯೆ ಪರಿಹರಿಸಿ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಲು ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವಿಷಯವಾಗಿ ಡಿಸೆಂಬರ್ ಕೊನೆಯ ವಾರ ಅಥವಾ ಜನವರಿಯಲ್ಲಿ ಮೊದಲನೇ ಹಂತದ ಕಾಮಗಾರಿಯನ್ನು
ಪ್ರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

by raghavendra
ಶಿಕಾರಿಪುರದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.

ವಿಮಾನ‌ ನಿಲ್ದಾಣದ ಬಗ್ಗೆ ಶೀಘ್ರವೇ ಕ್ರಮ
ಶಿವಮೊಗ್ಗದ ಸೋಗಾನೆಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ತಾಂತ್ರಿಕ ವಿಷಯಗಳ ಬಗ್ಗೆ ರೈಟ್ಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಂಸದರು ಸೂಚಿಸಿದರು.
ರೈಟ್ಸ್ ಅಧಿಕಾರಿಗಳಾದ ಹರಿಬಾಬು, ಹಿರಿಯ ಡಿಜಿಎಂ ಎಂ.ಜಿ.ಸುದೀಪ್, ಜಿಎಂ‌ ಜೆ.ಶ್ರೀನಿವಾಸ್, ಎಡಿಷನಲ್ ಜನರಲ್ ಮ್ಯಾನೇಜರ್ ಎಂ.ರಾಜು‌ ಸೇರಿದಂತೆ‌ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

https://www.suddikanaja.com/2021/09/12/shivamogga-airoplane-five-routs-final-to-fly/

error: Content is protected !!