ಸರ್ಕಾರಿ ನೌಕರರ ವಿರುದ್ಧ ರಮೇಶ್ ಕುಮಾರ್ ಅಸಾಂವಿಧಾನಿಕ ಪದ ಪ್ರಯೋಗ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಗರಂ

 

 

ಸುದ್ದಿ ಕಣಜ.ಕಾಂ | KARNATAKA | POLITICS
ಶಿವಮೊಗ್ಗ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸರ್ಕಾರಿ ನೌಕರರ ವಿರುದ್ಧ ಅಸಾಂವಿಧಾನಿಕ ಪದ ಪ್ರಯೋಗ ಮಾಡಿದ್ದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಸಿಡಿಮಿಡಿಗೊಂಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ರಮೇಶ್ ಅವರು ಒಬ್ಬ ಸಜ್ಜನ ರಾಜಕಾರಣಿ. ಹೀಗಿರುವಾಗ, ಈ ರೀತಿ ಮಾತನಾಡುವುದು ಅವರಿಗೆ ಘನತೆ ತರುವಂತಹದ್ದಲ್ಲ ಎಂದು ಹೇಳಿದರು‌.
ಸರ್ಕಾರಿ ನೌಕರರು ಭಾರೀ ಒತ್ತಡದ ನಡುವೆ ಕಾರ್ಯನಿರ್ವಹಿಸುತಿದ್ದಾರೆ. ಅದರಲ್ಲೂ ಕೋವಿಡ್ ಕಾಲಘಟ್ಟದಲ್ಲಿ ಸಾಕಷ್ಟು ಕಷ್ಟಪಡುತಿದ್ದಾರೆ. ಅವರ ಬಗ್ಗೆ ಸಾರ್ವಜನಿಕವಾಗಿ ಅಸಾಂವಿಧಾನಿಕ ಪದ ಬಳಕೆ ಮಾಡಿರಿವುದು ಸರಿಯಲ್ಲ. ಇಂತಹ ಪದ ಬಳಕೆಯಿಂದ ತಮ್ಮ ಗೌರವ ತಾವೇ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರಿ ನೌಕರರನ್ನು ಬೈಯುವ ಮೊದಲು ಯೋಚಿಸಬೇಕು. ಸಾಕಷ್ಟು ಹುದ್ದೆಗಳು ಖಾಲಿ‌ ಇದ್ದರೂ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುತಿದ್ದಾರೆ. ಹೀಗಿರುವಾಗ, ಅವರ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ. ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

error: Content is protected !!