ಸ್ಮಶಾನದ ಹತ್ತಿರ ಮಹಿಳೆಯ ಕತ್ತು ಕೊಯ್ದು ಕೊಲೆ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿಕಾರಿಪುರ: ತಾಲೂಕಿನ ಅಮಟೆಕೊಪ್ಪ ಸ್ಮಶಾನದ ಹತ್ತಿರ ಮಹಿಳೆಯೊಬ್ಬರ ಕತ್ತು ಕೊಯ್ದು‌ ಕೊಲೆ ಮಾಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಕಪ್ಪನಹಳ್ಳಿ ಗ್ರಾಮದ ನಿವಾಸಿ ಹೇಮಾವತಿ (35) ಕೊಲೆಯಾದ ಮಹಿಳೆ. ಈಕೆಯ ಗಂಡ ಹತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದು, ಮೂರು ವರ್ಷಗಳಿಂದ ಅದೇ ಗ್ರಾಮದ ವ್ಯಕ್ತಿಯೊಬ್ಬರ ಜೊತೆ ಸಲುಗೆಯಿಂದ ಇದ್ದರು. ಈ ವಿಚಾರವಾಗಿ ಪಂಚಾಯಿತಿ ಮಾಡಿ ಆ ವ್ಯಕ್ತಿಗೆ ಹೇಮಾವತಿ ಸಮೀಪ ಹೋಗದಂತೆ ತಿಳಿಸಲಾಗಿತ್ತು. ಪಂಚಾಯಿತಿ ದಿನ ಹೇಮಾವತಿ ಅವರಿಗೆ ವ್ಯಕ್ತಿಯು ಕೊಲೆ ಬೆದರಿಕೆಯನ್ನು ಸಹ ಹಾಕಿದ್ದ ಎಂದು‌ ದೂರಿನಲ್ಲಿ ತಿಳಿಸಲಾಗಿದೆ.
ಶನಿವಾರ ಬೆಳಗಿನ ಜಾವ ಹೇಮಾವತಿ ಅವರು ಫ್ಯಾಕ್ಟರಿಯ ಕೆಲಸಕ್ಕೆ ಹೋಗುತ್ತಿರುವಾಗ ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದು, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

error: Content is protected !!