ಮತ್ತೆ ಮುಂದುವರಿಯಲಿದೆ ಸಾರಿಗೆ ನೌಕರರ ಮುಷ್ಕರ, ನಾಳೆಯೂ ಬಸ್ ಸಿಗುವುದು ಡೌಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾರಿಗೆ ನೌಕರರ ಮುಷ್ಕರ ಮುಂದುವರಿಲಿದೆ. ಹೀಗಾಗಿ, ಸೋಮವಾರ ಸಹ ಶಿವಮೊಗ್ಗದಿಂದ ಬೇರೆಡೆಗೆ ತೆರಳುವ ಪ್ರಯಾಣಿಕರಿಗೆ ಬಸ್ ಸೌಲಭ್ಯ ಸಿಗುವುದು ಅನುಮಾನ.

ಸಾರಿಗೆ ನೌಕರರಿಗೆ ಇನ್ನೂ ಸಿಗದ ನವೆಂಬರ್ ವೇತನ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನೌಕರರು ಮುಷ್ಕರಕ್ಕೆ ಮುಂದಾಗಿದ್ದು, ಸರ್ಕಾರ ನೌಕರರ ಮುಖಂಡರನ್ನು ಕರೆದು ಮಾತುಕತೆ ನಡೆಸಿದ್ದಾರೆ. ಆದರೆ, ಸರ್ಕಾರಿ ನೌಕರರೆಂದು ಪರಿಗಣಿಸಲು ಸರ್ಕಾರ ಒಪ್ಪದೇ ಇರುವ ಕಾರಣದಿಂದ ಮುಷ್ಕರ ಮತ್ತೆ ಮುಂದುವರಿಯಲಿದೆ.

ಸಾರಿಗೆ ನೌಕರರ ಮುಷ್ಕರ, ಜನರ ಪರದಾಟ

ಸರ್ಕಾರದೊಂದಿಗಿನ ನಡೆದ ಸಭೆ ವಿಫಲವಾಗಿದೆ. ಈ ಹಿನ್ನೆಲೆ ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಸರ್ಕಾರ ಎಲ್ಲ ಬೇಡಿಕೆಗಳಿಗೆ ಒಪ್ಪಿಗೆ ನೀಡಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ನೌಕರರು ಕರ್ತವ್ಯಕ್ಕೆ ಮರಳು ನಿರ್ಧರಿಸಿದ್ದರು. ಆದರೆ, ಏಕಾಏಕಿ ಬೇಡಿಕೆಗಳು ಈಡೇರಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆ ಮತ್ತೆ ಮುಷ್ಕರ ನಡೆಸಲು ಮುಂದಾಗಿದ್ದಾರೆ.

error: Content is protected !!