‘ಅಕಾಡೆಮಿ’ ಶಬ್ದ ಈಗ ಸಂಸ್ಥೆ, ಆಗ ವ್ಯಕ್ತಿಯ ಹೆಸರು!

ಸುದ್ದಿ ಕಣಜ.ಕಾಂ | KARNATAKA | PADA KANAJA
ಇದು ಗ್ರೀಕ್ ಭಾಷೆಯ ಶಬ್ದವಾಗಿದೆ.  AKADEMOS ಅಥವಾ AKADEMUS ಎಂಬ ಶಬ್ದಗಳಿಂದ ಬಂದುದು. ಅದು ಒಬ್ಬ ಶ್ರೀಮಂತ ವಿದ್ವಾಂಸನ ಹೆಸರು. ಅಥೆನ್ಸ್ ನಗರದಲ್ಲಿ ಪ್ಲೊಟೊ(PLATO) ಎಂಬ ದಾರ್ಶನಿಕನು ಬೋಧಿಸುತ್ತಿದ್ದ ಹಣ್ಣಿನ ಮರಗಳ ತೋಪಿಗೆ AKADEMUS ಎಂಬ ಹೆಸರಿತ್ತು. ಈಗ ಅನೇಕ ಭಾಷೆಗಳಲ್ಲಿ ಅಕಾಡೆಮಿ ಎಂಬ ಶಬ್ದ ಪ್ರಯೋಗದಲ್ಲಿದೆ.

ಇದು 1) ಪ್ರೌಢ ಶಾಲೆ, 2) ಒಂದು ವಿಷಯವನ್ನು ವಿಶೇಷವಾಗಿ ಬೋಧಿಸುವ ಸಂಸ್ಥೆ 3) ಕಲೆಗಳ ಅಭಿವೃದ್ಧಿಗೆ ದುಡಿಯುವ ಸಂಸ್ಥೆ. 4) ವಿದ್ವಾಂಸರ ಸಂಸ್ಥೆ ಎಂಬ ಅರ್ಥಗಳನ್ನು ಹೊಂದಿದೆ. ಇಲ್ಲಿ ಕಲೆಗಳ ಪ್ರಕಾರಗಳ ನೂತನ ಆವಿಷ್ಕಾರಗಳ ಕುರಿತು ವಿಮರ್ಶೆ ಮಾಡಿ ಅರ್ಹತೆಯನ್ನು ನಿರ್ಣಯಿಸಬಹುದಾಗಿತ್ತು.

ಈ ಎಲ್ಲ ಹಿನ್ನೆಲೆಯಲ್ಲಿ ಅಕಾಡೆಮಿ ಶಬ್ದದ ವಿಸ್ತಾರವು ಗೋಚರವಾಗುತ್ತದೆ. ಈಗಂತೂ ಅಕಾಡೆಮಿ ಎಂದರೆ ಒಂದು ಸಂಸ್ಥೆ ಎಂಬ ಅರ್ಥ ಬೇರೂರಿದೆ. ಈ ಸಂಸ್ಥೆ ಕಲೆಗಳ ಅಭಿವೃದ್ಧಿಗೆ ದುಡಿಯುತ್ತದೆ ಎಂಬ ತಿಳಿವಳಿಕೆಯೂ ಇದೆ.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

ಮೊದಲ ದಿನ ‘ರಾಬರ್ಟ್’ ಗಳಿಸಿದ್ದೆಷ್ಟು ಗೊತ್ತಾ?