ಜನರ ಬಾಯಿಗೆ ಸಿಕ್ಕಿ ದಾರಿ ತಪ್ಪಿದ `ಅಡ್ಡೇಟಿಗೊಂದು ಗುಡ್ಡೇಟು’, ಹಾಗಾದರೆ ಸರಿ ಪದವೇನು, ಏನಿದರ ಅರ್ಥ

 

 

ಸುದ್ದಿ ಕಣಜ.ಕಾಂ | KARNATAKA | PADA KANAJA

ಅಡ್ಡೇಟಿಗೊಂದು ಗುಡ್ಡೇಟು ಎಂಬುವುದು ಗಾದೆ. ಈ ಗಾದೆಯ ಮೂಲ ರೂಪ ಜನರ ಬಾಯಲ್ಲಿ ಬರಬರುತ್ತ ತುಂಬ ವ್ಯತ್ಯಾಸ ಹೊಂದಿದೆ. ಅಡ್ಡೇಟು ಎನ್ನುವುದಕ್ಕೆ ಗುರಿಯಿಲ್ಲದೇ ಹೊಡೆದ ಏಟು, ಹೊಡೆತ ಎಂದರ್ಥ.
ಹೀಗೆ ಗುರಿಯಿಲ್ಲದೇ ಹೊಡೆಯುತ್ತಿದ್ದರೆ ಅಕಸ್ಮಾತ್ ಒಂದು ಗುರಿಯನ್ನು ತಲುಪಿ ಬಿಡಬಹುದು. ಇದನ್ನು ಇಂಗ್ಲಿಷ್ ನಲ್ಲಿ FLUKE ಎನ್ನುತ್ತಾರೆ.

READ | ಮಾಚೇನಹಳ್ಳಿ ಬಳಿ ಭೀಕರ ಅಪಘಾತ, ಭದ್ರಾವತಿಯ ಇಬ್ಬರು ಯುವಕರ ಸಾವು

ಇದಕ್ಕೆ ಇಂಗ್ಲಿಷ್ ನಲ್ಲಿ A STROKE OF GOOD LUCK ಎಂದರ್ಥ. ಕನ್ನಡದ ಗಾದೆಯಲ್ಲಿಯೂ ಅದೇ ಅರ್ಥವಿದೆ. ಆದರೆ, ಗುಡ್ಡೇಟು ಅಥವಾ ಗೊಡ್ಡೇಟು ಎಂದಾಗಲಿ ಶಬ್ದವಿದ್ದರೆ ಅದಕ್ಕೆ ಅರ್ಥ ಬರುವುದಿಲ್ಲ. ಈ ಗಾದೆಯ ಅರ್ಥದ ಬಗ್ಗೆ ಅನುಮಾನವಿಲ್ಲದೇ ಇರುವುದರಿಂದ ಈ ಎರಡನೇ ಪದದಲ್ಲಿ ಆಗಿರುವ ಭಾಷಾ ಪ್ರಯೋಗದಲ್ಲಿರುವ ತಪ್ಪನ್ನು ಸರಿ ಮಾಡಬೇಕು. ನಿಜವಾಗಿ ಅದು `ಅಡ್ಡೇಟಿಗೊಂದು ಕುರಿತೇಟು- ಕುರ್ತೇಟು’. ಎಂದರೆ, ಗುರಿಯಿಟ್ಟು ಹೊಡೆದ ಏಟು. ಈ ಕುರ್ತೇಟು ಎಂಬ ಶಬ್ದ ಅಡ್ಡೇಟು ಎಂಬ ಶಬ್ದದ ಪ್ರಾಸಕ್ಕಾಗಿ ಗುಡ್ಡೇಟು ಗೊಡ್ಡೇಟು ಆಗಿದೆ. ಇದು ಭಾಷೆಯಲ್ಲಿ ಆಗಾಗ ಆಗುವ ವೈಚಿತ್ರ್ಯ.

https://www.suddikanaja.com/2021/11/04/the-word-mafia-have-history/

error: Content is protected !!