ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗುರುವಾರ ರಾತ್ರಿ ಕುಂಸಿ ಮತ್ತು ಆನಂದಪುರದ ಮಧ್ಯೆ ಹಳಿತಪ್ಪಿದ ಮೈಸೂರು-ತಾಳಗುಪ್ಪ ಇಂಟರ್‍ಸಿಟಿ ರೈಲು ವಾಪಸ್ ಹೋಗದ ಕಾರಣದಿಂದಾಗಿ ಪ್ರಯಾಣಿಕರ ಟಿಕೆಟ್ಟಿನ ಪೂರ್ತಿ ಹಣವನ್ನು ರೀಫಂಡ್ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಹಳಿತಪ್ಪಿದ ಇಂಟರ್ ಸಿಟಿ ರೈಲು, ಹೊಸ ವರ್ಷಕ್ಕೆ ತಪ್ಪಿದ ಭಾರಿ ದುರಂತ
ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸಲಾಗದ ಪ್ರಯಾಣಿಕರಿಗೆ ಅವರ ಹಣವನ್ನು ಹಿಂದುರುಗಿಸಲಾಗುತ್ತಿದೆ. ಅದು ಜನವರಿ 2ರ ವರೆಗೆ ಮಾತ್ರ ನೀಡುತ್ತಿದ್ದು, ಟಿಕೆಟ್ ಕೊಟ್ಟು ಹಣ ಪಡೆಯಬಹುದಾಗಿದೆ.
ಆನ್‍ಲೈನ್ ಬುಕಿಂಗ್ ಮಾಡಿದ್ದಲ್ಲಿ ಖಾತೆಗೆ ನೇರ ಹಣ: ಆನ್ ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಿದವರ ಪ್ರಯಾಣಿಕರ ಹಣ ಅವರ ಖಾತೆಗೆ ಜಮೆ ಆಗಲಿದೆ. ಹೀಗಾಗಿ, ಅವರು ರೈಲು ನಿಲ್ದಾಣಕ್ಕೆ ಬರುವ ಅಗತ್ಯವಿಲ್ಲ. ಆದರೆ, ಕೌಂಟರ್‍ನಲ್ಲಿ ಟಿಕೆಟ್ ಪಡೆದವರು ಕಡ್ಡಾಯವಾಗಿ ರೈಲು ನಿಲ್ದಾಣದ ಕೌಂಟರ್‍ನಲ್ಲಿಯೇ ಹಣ ಪಡೆಯತಕ್ಕದ್ದು.