ಮನೆ ಅಂಗಳದಲ್ಲೇ ಕಾಡು ಎಮ್ಮೆ ಹಿಂಡು ಪ್ರತ್ಯಕ್ಷ, ಜನರಲ್ಲಿ ಆತಂಕ

 

 

ಸುದ್ದಿ ಕಣಜ.ಕಾಂ
ಸಾಗರ: ತಾಲೂಕಿನ ತಾಳಗುಪ್ಪ ಸಮೀಪದ ಬಾಳೆಹಳ್ಳಿಯಲ್ಲಿ ಮನೆ ಅಂಗಳದಲ್ಲೇ ಕಾಡು ಎಮ್ಮೆಯೊಂದು ಪ್ರತ್ಯಕ್ಷವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಬಾಳೆಹಳ್ಳಿ ಗ್ರಾಮದ ನಿವಾಸಿ ರವೀಂದ್ರ ಮೂರ್ತಿ ಅವರ ಮನೆಯ ಅಂಗಳದಲ್ಲಿ ಗುರುವಾರ ಬೆಳಗ್ಗೆ ಕಾಡು ಎಮ್ಮೆ ಕಾಣಿಸಿಕೊಂಡಿದೆ.

ಕುಟುಂಬದವರೊಂದಿಗೆ ಕುಳಿಸಿದ್ದಾಗ ಕಾಡೆಮ್ಮೆ ಪ್ರತ್ಯಕ್ಷ

ರವೀಂದ್ರ ಮೂರ್ತಿ ಅವರು ತಮ್ಮ ಕುಟುಂಬದೊಂದಿಗೆ ಮನೆಯ ಮುಂದೆ ಕುಳಿತುಕೊಂಡಿದ್ದಾಗ ಕಾಡು ಎಮ್ಮೆಗಳ ಹಿಂಡು ಅಂಗಳಕ್ಕೆ ನುಗ್ಗಿವೆ. ಇದರಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಶರಾವತಿ ಹಿನ್ನೀರಿನ ಬೆಳ್ಳಣ್ಣೆ, ಅಂಬುಗಳಲೆ, ಬಾಳಿಗ್ಗೆರೆ, ಹಕ್ರೆ, ತುಂಬೆ, ಬಾಳೆಹಳ್ಳಿ ಈ ಪ್ರದೇಶಗಳಲ್ಲಿ ಕಾಡು ಎಮ್ಮೆಗಳು ನಿರಂತರ ಕಾಣಿಸಿಕೊಳ್ಳುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅದರಲ್ಲೂ ತೋಟಗಳಿಗೆ ನುಗ್ಗಿ ಬೆಳೆಗಳನ್ನೂ ಹಾಳು ಮಾಡುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

error: Content is protected !!