ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ಪಟ್ಟಣದ ಬಿ.ಎಚ್.ರಸ್ತೆಯಲ್ಲಿ ಗೂಡ್ಸ್ ಆಟೋವೊಂದು ಇಬ್ಬರು ಯುವತಿಯರಿಗೆ ಡಿಕ್ಕಿ ಹೊಡೆದಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಎಸ್.ಎನ್. ರಸ್ತೆಯ ನಿವಾಸಿಗಳಾದ ಸಮ್ರೀನ್ ಬಾನು(21), ಆಫ್ರೀನ್ ಬಾನು(19) ಅವರಿಗೆ ಆಟೋ ಡಿಕ್ಕಿ ಹೊಡೆದಿದ್ದು, ಸ್ಥಿತಿ ಗಂಭೀರವಾಗಿದೆ.
ಹೊಲಿಗೆ ಕ್ಲಾಸ್ ಮುಗಿಸಿ ಬರುವಾಗ ಅಪಘಾತ
ಹೊಲಿಗೆ ತರಬೇತಿ ಮುಗಿಸಿ ಮನೆಗೆ ಬರುತ್ತಿದ್ದರು. ಆಗ ವೇಗವಾಗಿ ಬಂದ ಗೂಡ್ಸ್ ಆಟೋ ದ್ವಿಚಕ್ರ ವಾಹನಕ್ಕೆ ಆಗಲಿದ್ದ ಡಿಕ್ಕಿ ತಪ್ಪಿಸಲು ಹೋಗಿ ಯುವತಿಯರಿಗೆ ಡಿಕ್ಕಿ ಹೊಡೆದಿದೆ. ನಂತರ, ವಿದ್ಯುತ್ ಕಂಬಕ್ಕೆ ಆಟೋ ಡಿಕ್ಕಿ ಹೊಡೆದಿದೆ. ಆಟೋ ಚಾಲಕನನ್ನು ಬಂಧಿಸಲಾಗಿದೆ.