ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಬೀದಿಗಿಳಿದು ಪ್ರತಿಭಟನೆ, ಕಾರಣವೇನು?

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಮುಖಂಡರು ನಗರದ ಮೆಗ್ಗಾನ್ ಆಸ್ಪತ್ರೆ ಮುಂಭಾಗ ಬುಧವಾರ ಪ್ರತಿಭಟನೆ ಮಾಡಿದ್ದು, ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸಣ್ಣಪುಟ್ಟ ಸ್ಕ್ಯಾನಿಂಗ್ ಮಾಡಬೇಕಾದರೂ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಇದರಿಂದ ಬಡ ರೋಗಿಗಳಿಗೆ ತೊಂದರೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಗ್ಗಾನ್ ನಲ್ಲಿರುವ ಹಲವು ಯಂತ್ರಗಳು ಹಾಳಾಗಿದ್ದು, ಅವುಗಳ ರಿಪೇರಿಗೆ ಹಣ ಮಂಜೂರು ಆಗಿಲ್ಲ. ಇದಕ್ಕೆಲ್ಲ ಸಚಿವ ಕೆ.ಎಸ್.ಈಶ್ವರಪ್ಪ ಅವರ ನಿರ್ಲಕ್ಷ್ಯವೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಪಿ. ಶೇಷಾದ್ರಿ, ಇಸ್ಮಾಯಿಲ್ ಖಾನ್, ದೇವೇಂದ್ರಪ್ಪ, ವೈ.ಎಚ್. ನಾಗರಾಜ್, ಯಮುನಾ ರಂಗೇಗೌಡ, ರಾಮೇಗೌಡ, ಚಂದ್ರಭೂಪಾಲ್, ಆರೀಫ್, ಮಧುಸೂದನ್, ಇಕ್ಕೇರಿ ರಮೇಶ್, ಚೇತನ್, ರಾಜು, ಜಗದೀಶ್, ಎನ್.ಡಿ. ಪ್ರವೀಣ್, ರೇಷ್ಮಾ, ತಬಸ್ಸುಮ್, ಕೌಸರ್, ಅರ್ಚನಾ, ಸೌಗಂಧಿಕಾ, ಧರ್ಮರಾಜ್, ಎಸ್.ಟಿ. ಶ್ರೀನಿವಾಸ್, ಯು.ಕೆ. ಪ್ರಕಾಶ್, ಚಂದನ್, ಜಿ.ಡಿ. ಮಂಜುನಾಥ್, ಸ್ಟೆಲ್ಲಾ ಮಾರ್ಟಿನ್, ಚಂದ್ರಕಲಾ, ಸಂಧ್ಯಾರಾಣಿ, ಪುಷ್ಪಾ, ಸುವರ್ಣಾ ಉಪಸ್ಥಿತರಿದ್ದರು.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್.  ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/09/07/high-court-order-to-stop-encroachment-of-mc-gann-teaching-district-hospital/

error: Content is protected !!