ಸುದ್ದಿ ಕಣಜ.ಕಾಂ | DISTRICT | 18 OCT 2022
ಶಿವಮೊಗ್ಗ(Shivamogga): ಗಂಧದ ಮರ ಕಳ್ಳತನ ಮಾಡಿದ್ದ ಮೂವರಿಗೆ 5 ವರ್ಷ ಸಾದಾ ಕಾರಾವಾಸ ಶಿಕ್ಷೆ ಮತ್ತು ₹50,000 ದಂಡ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಧೀಶ ಕೆ.ಎಸ್.ಮಾನು ತೀರ್ಪು ನೀಡಿದ್ದಾರೆ.
READ | ಶಿವಮೊಗ್ಗದ ಹಲವೆಡೆ ಪೊಲೀಸರ ದಿಢೀರ್ ಕಾರ್ಯಾಚರಣೆ, ರಿಪೋರ್ಟ್ ಪಾಸಿಟಿವ್ ಬಂದರೆ ಅಂದರ್
ತರಿಕೆರೆ ತಾಲೂಕಿನ ಬಿಲ್ಲಹಳ್ಳಿ ನಿವಾಸಿ ಮಹಮ್ಮದ್ ರಿಜ್ವಾನ್ (25), ಬರ್ಕತ್ ಅಲಿ (54) ಮತ್ತು ಚನ್ನಗಿರಿಯ ಹೊನ್ನೆಬಾಗಿ ಮಹಮ್ಮದ್ ಆಜಂ(25) ಎಂಬುವವರಿಗೆ 5 ವರ್ಷ ಸಾದಾ ಕಾರಾವಾಸ ಶಿಕ್ಷೆ ಮತ್ತು ₹50,000 ದಂಡ, ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿ 6 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
2017ರ ನವೆಂಬರ್ 9ರಂದು ಶಿಕಾರಿಪುರ ಟೌನ್ ಠಾಣೆ ವ್ಯಾಪ್ತಿ ಮುದಿಗೌಡರ ಕೇರಿಯಲ್ಲಿ ಶ್ರೀಗಂಧದ ಮರವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಲಿಸಲಾಗಿತ್ತು. ಆಗಿನ ತನಿಖಾಧಿಕಾರಿ ಶಿಕಾರಿಪುರ ಸಿಪಿಐ ಬಸವರಾಜ್ ಅವರು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಮಮತಾ ವಾದ ಮಂಡಿಸಿದ್ದರು.
https://suddikanaja.com/2022/10/17/police-raid-in-shivamogga/