ಶಿವಮೊಗ್ಗದಲ್ಲಿ ತರಕಾರಿ ಬೆಲೆ ಶಾಕ್, ಇಂದು ಯಾವುದಕ್ಕೆಷ್ಟು ಬೆಲೆ, ದಾಖಲೆಯತ್ತ ಬೆಂಡೆಕಾಯಿ, ಟೊಮ್ಯಾಟೊ

 

 

ಸುದ್ದಿ ಕಣಜ.ಕಾಂ | DISTRICT | MARKET TRENDS
ಶಿವಮೊಗ್ಗ: ಅಕಾಲಿಕ ಮಳೆ ರೈತರು ಬೆಳೆದ ಬೆಳೆಯನ್ನು ಕಸಿದುಕೊಂಡಿದೆ. ಅದರ ಬೆನ್ನಲ್ಲೇ ಅಗತ್ಯವಿರುವಷ್ಟು ತರಕಾರಿ ಪೂರೈಕೆ ಆಗದೇ ಇರುವುದರಿಂದ ಶಿವಮೊಗ್ಗದ ತರಕಾರಿ ಅಂಗಡಿಗಳು ಬಿಕೋ ಎನ್ನುತ್ತಿವೆ.
ಬೇಡಿಕೆ ಮತ್ತು ಪೂರೈಕೆಯಲ್ಲಿನ ಕಂದಕದ ಪರಿಣಾಮ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರಿದೆ. ಗ್ರಾಹಕರು ತರಕಾರಿ ಖರೀದಿಸುವ ಮುನ್ನ ಯೋಚಿಸುವಂತಾಗಿದೆ. ಕಳೆದ ವಾರವಷ್ಟೇ ₹50ರೊಳಗೆ ಇದ್ದ ದರ ಕೆಜಿಗೆ ₹30-40 ಏರಿಕೆ ಆಗಿದೆ.

READ | ಇಂಧನ ಬೆಲೆಯಲ್ಲಿ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆಯೆಷ್ಟು?

ಮಾರುಕಟ್ಟೆ ಬರುತ್ತಿಲ್ಲ ಕ್ವಾಲಿಟಿ ವೆಜಿಟೆಬಲ್
ಮಳೆಯಿಂದಾಗಿ ಬಹುತೇಕ ಎಲ್ಲ ತರಕಾರಿಗಳು ಹಾಳಾಗಿವೆ. ಆದ್ದರಿಂದ, ಗುಣಮಟ್ಟದ ತರಕಾರಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಆದರೆ, ಅದರ ಬೆಲೆ ಮಾತ್ರ ಹೆಚ್ಚಿದೆ. ಈರುಳ್ಳಿ ಬೆಲೆಯಂತೂ ಕೆಳಗಿಳಿಯುವ ಸಾಧ್ಯತೆಯೇ ಕಾಣುತ್ತಿಲ್ಲ. ಪೂನಾ ಈರುಳ್ಳಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ ₹40 ಇದೆ.
ಇನ್ನುಳಿದ ತರಕಾರಿಗಳನ್ನು ಹೇಗೋ ಒಂದೆರಡು ದಿನ ಇಡಬಹುದು. ಆದರೆ, ಸೊಪ್ಪುಗಳನ್ನು ಮಧ್ಯಾಹ್ನದವರೆಗೆ ಸಂರಕ್ಷಿಸುವುದು ಕಷ್ಟವಾಗುತ್ತಿದೆ. ತಂದದ್ದರಲ್ಲಿ ಬಹುಪಾಲು ಕೊಳೆಯುತ್ತಿರುವುದರಿಂದ ಮಾರಾಟಗಾರರಿಗೆ ನಷ್ಟ ಆಗುತ್ತಿದೆ.

follow us in link treeಹೋಟೆಲ್ ಗಳ ಮೇಲೂ ಎಫೆಕ್ಟ್
ಹೋಟೆಲ್ ಗಳು ನಿತ್ಯ ಖರೀದಿಸುವಷ್ಟು ತರಕಾರಿಯನ್ನು ಅಂಗಡಿಗಳನ್ನು ಸಗಟಿನಲ್ಲಿ ಖರೀದಿಸಲು ಕೊಂಚ ಹಿಂದೇಟು ಹಾಕುತಿದ್ದಾರೆ. ಕಳೆದ ವಾರ ತೊಂಡೆ ಕಾಯಿ ಕೆಜಿಗೆ ₹60 ಇತ್ತು. ಈಗ ಅದರ ಬೆಲೆಯು ₹120ಕ್ಕೆ ಏರಿಕೆ ಆಗಿದೆ.

READ | ಶಿವಮೊಗ್ಗದಲ್ಲಿ ತರಕಾರಿ ಬೆಲೆ ಗಗನಮುಖಿ, ದಾಖಲೆಯತ್ತ ರೇಟ್

ಯಾವ ತರಕಾರಿಗೆ ಎಷ್ಟು ಬೆಲೆ?
ಭೆಂಡೆಕಾಯಿ 80, ಮೈಸೂರು 80, ತೊಂಡೆ 120
ಚವಳೆಕಾಯಿ 80, ಟೊಮ್ಯಾಟೊ 80, ಬೀಮ್ಸ್ 80, ಕ್ಯಾಪ್ಸಿಕಮ್ 120, ಕ್ಯಾರೆಟ್ 80-100,ಬದನೆ ಕಾಯಿ 40,ಬಣ್ಣದ ಸೌತೆ 60,ಮೂಲಂಗಿ 50 ಬೆಲೆ ಇದೆ.

https://www.suddikanaja.com/2021/06/24/operation-greens/

error: Content is protected !!