ನಾಗರ ಹಾವು ಸಾಯಿಸಿದ ಸ್ಮಾರ್ಟ್ ಸಿಟಿ ಎಂಜಿನಿಯರ್ ಸೇರಿ ಮೂವರ ಮೇಲೆ‌ ಕೇಸ್

 

 

ಸುದ್ದಿ ಕಣಜ.ಕಾಂ‌ | DISTRICT | CRIME NEWS
ಶಿವಮೊಗ್ಗ: ನಾಗರ ಹಾವನ್ನು ಸಾಯಿಸಿದ್ದಾರೆ ಎನ್ನಲಾದ ಸ್ಮಾರ್ಟ್ ಸಿಟಿ ಎಂಜಿನಿಯರ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ಮಾರ್ಟ್ ಸಿಟಿ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ್ ಕುಮಾರ್, ಎಇಇ ರಾಜಕುಮಾರ್ ಮತ್ತು ಕೆಲಸಗಾರ ನಾಗಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ‌ ನಡೆಯುತ್ತಿದೆ.

READ | ಶಿವಮೊಗ್ಗದಲ್ಲಿ ಇಬ್ಬರಿಗೆ ಗಡಿಪಾರು ಶಿಕ್ಷೆ, ಒಬ್ಬ‌ 6, ಮತ್ತೊಬ್ಬ  3 ತಿಂಗಳು ಜಿಲ್ಲೆಗೆ ಕಾಲಿಡುವಂತಿಲ್ಲ

ದೇವಸ್ಥಾನದ ತೆರವು ವೇಳೆ ಕಂಡ ಹಾವು
ನಗರದ ಎಪಿಎಂಸಿ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಸ್ಮಾರ್ಟ್ ಸಿಟಿ ಕಾಮಗಾರಿಗೋಸ್ಕರ ತೆರವುಗೊಳಿಸಲಾಗಿದೆ. ಆ ವೇಳೆ ಕಂಡು ಬಂದ ಹಾವನ್ನು ಹೊಡೆದು ಸಾಯಿಸಲಾಗಿದೆ.
ನಾಗರ ಹಾವನ್ನು ಸಾಯಿಸಿದ್ದಕ್ಕಾಗಿ ಈ ಮೂವರ ಮೇಲೆ‌ ಶಂಕರ ವಲಯ ವಿಭಾಗದಲ್ಲಿ ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ಸೆಕ್ಷನ್ 9, 31 ಮತ್ತು 51ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗಿದೆ.

error: Content is protected !!