ಪದವೀಧರರಿಗೆ ಇಲ್ಲಿದೆ ಕೆಎಂಎಫ್ ನಲ್ಲಿ ಉದ್ಯೋಗ, ಕೈತುಂಬ ಸಂಬಳ, ಈಗಲೇ‌ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (degree) ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅವಕಾಶವಿದೆ‌. ಈಗಾಗಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, 2022ರ ಜನವರಿ 20 ಅಂತಿಮ ದಿನವಾಗಿದೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ (Vijayapura & Bagalkot District Co-operative Milk Producers’ Societies’ Union Ltd) ವು ವಿವಿಧ ಹುದ್ದೆಗಳ ಭರ್ತಿ ಅಧಿಸೂಚನದ ಹೊರಡಿಸಿದ್ದು, ಉದ್ಯೋಗ ಆಕಾಂಕ್ಷೆಗಳ ಪಾಲಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಮಾಸಿಕ ವೇತನವು ಆಯಾ ಹುದ್ದೆಗಳಿಗೆ ಅನುಗುಣವಾಗಿ ₹21,400ರಿಂದ ₹97,100 ವರೆಗೆ ಇದೆ.

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು‌ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ, ಎಸ್​ಎಸ್​ಎಲ್​​ಸಿ, ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಸಹಾಯಕ ವ್ಯವಸ್ಥಾಪಕರು 5
ಸಿಸ್ಟ್ಂ ಅಧಿಕಾರಿ 1
ತಾಂತ್ರಿಕ ಅಧಿಕಾರಿ 2
ಮಾರುಕಟ್ಟೆ ಅಧೀಕ್ಷಕರು 1
ವಿಸ್ತರಣಧಿಕಾರಿ 8
ಮಾರುಕಟ್ಟೆ ಸಹಾಯಕರು 2
ಕೆಮಿಸ್ಟ್ ದರ್ಜೆ 2
ಆಡಳಿತ ಸಹಾಯಕ 1
ಲೆಕ್ಕ ಸಹಾಯಕರು 4
ಕಿರಿಯ ಸಿಸ್ಟ್ಂ ಆಪರೇಟರ್ 2
ಕಿರಿಯ ತಾಂತ್ರಿಕ 2
ಹಾಲು ರವಾನೆಗಾರರು 4
ಒಟ್ಟು 39

ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18-35 ವರ್ಷದೊಳಗಿರಬೇಕು. 2ಎ, 2ಬಿ, 3ಎ ಮತ್ತು 3ಬಿ ಯ ಗರಿಷ್ಠ 38 ವರ್ಷ ಮತ್ತು ಪರಿಶಿಷ್ಟ ಜಾತಿ(SC)/ ಪರಿಶಿಷ್ಟ ಪಂಗಡ (ST)/ ಪ್ರವರ್ಗ 1 (Cat-1)ರ ಗರಿಷ್ಠ 40 ವರ್ಷ ವಯೋಮಿತಿಯೊಳಗಿರಬೇಕು. ಎಸ್.ಸಿ, ಎಸ್.ಟಿ, ಪ್ರವರ್ಗ 1ರ ಅಭ್ಯರ್ಥಿಗಳು ₹500 ಹಾಗೂ ಇನ್ನುಳಿದ ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕ (application fee) ನಿಗದಿಪಡಿಸಲಾಗಿದೆ. ಲಿಖಿತ ಪರೀಕ್ಷೆ (written exam)ಹಾಗೂ ಸಂದರ್ಶನ (interview) ದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

DETAILED NOTIFICATION

CLICK HERE TO APPLY

PAPER NOTIFICATION

https://www.suddikanaja.com/2021/11/27/jobs-on-any-degree-in-national-fertilizers-limited-post-of-senior-consultant-and-consultant/

error: Content is protected !!