ಸವಳಂಗ ರಸ್ತೆಯಲ್ಲಿ ಬೆಳಗ್ಗೆಯಿಂದಲೇ ಟ್ರಾಫಿಕ್ ಜಾಮ್

 

 

ಸುದ್ದಿ ಕಣಜ.ಕಾಂ | CITY | TRAFIC JAM
ಶಿವಮೊಗ್ಗ: ನಗರದ ಸವಳಂಗ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಭಾರಿ ಟ್ರಾಫಿಕ್ ಜಾಮ್ ಇದ್ದು, ಕಚೇರಿ, ಶಾಲಾ ಕಾಲೇಜುಗಳಿಗೆ ತೆರಳುವವರು ಪರದಾಡಿದರು.
ಕಾಶಿಪುರದಲ್ಲಿ ರೈಲ್ವೆ ಲೆವಲ್ ಕ್ರಾಸಿಂಗ್ ನಲ್ಲಿ ತಾಂತ್ರಿಕ ಪರಿಶೀಲನೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ. ಎಲ್.ಸಿ. ನಂ. 50 ರಲ್ಲಿ ತಾಂತ್ರಿಕ ಪರಿಶೀಲನೆ ನಡೆಯುತ್ತಿರುವುದರಿಂದ ಎಲ್.ಸಿ. ನಂ. 52ರ ಕಾಶಿಪುರ, ಎಲ್.ಸಿ. ನಂ. 49ರ ಸವಳಂಗ ಮಾರ್ಗದ ಮೂಲಕ ಉಷಾ ನರ್ಸಿಂಗ್ ಹೋಮ್, ಜೈಲು ರಸ್ತೆ, ವಿನೋಬನಗರ ಪೊಲೀಸ್ ಚೌಕಿ ಮುಖಾಂತರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ, ಈ ಮಾರ್ಗದಲ್ಲಿ ಬೆಳಗ್ಗೆಯಿಂದ ಟ್ರಾಫಿಕ್ ಜಾಮ್ ಇದೆ.

READ | ಇಂದು ರಾತ್ರಿಯಿಂದಲೇ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗದ ವಿವಿರ ಇಲ್ಲಿದೆ

ಸವಳಂಗ ರಸ್ತೆಯಲ್ಲಿ ಬಸ್, ಲಾರಿ ಸೇರಿದಂತೆ ಭಾರಿ ಗಾತ್ರದ ವಾಹನಗಳ ಓಡಾಟ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಉಷಾ ನರ್ಸಿಂಗ್ ಹೋಮ್ ನಿಂದಲೇ ಟ್ರಾಫಿಕ್ ಜಾಮ್ ಉಂಟಾಗಿದೆ.

https://www.suddikanaja.com/2021/11/23/jobs-on-degree-all-institute-of-speech-and-hearing/

error: Content is protected !!