ಶರಾವತಿ ಕಣಿವೆಯಲ್ಲಿ ಆಂಬ್ಯುಲೆನ್ಸ್ ಸಿಗದೇ ನವಜಾತ ಶಿಶು ಸೇರಿ ಇಬ್ಬರ ಸಾವು

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ತುಮರಿ ಭಾಗದಲ್ಲಿ ಆಂಬ್ಯುಲೆನ್ಸ್ ಸಿಗದೇ ಇಬ್ಬರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬುಧವಾರ ನಡೆದಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ.
ಗರ್ಭಿಣಿ ಚೈತ್ರಾ ಅವರಿಗೆ ಬುಧವಾರ ಸಂಜೆ 6 ಗಂಟೆಯ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಂಬ್ಯುಲೆನ್ಸ್ ಗೆ ಕರೆ ಮಾಡಲಾಗಿದೆ. ಆದರೆ, ರಾತ್ರಿಯಾದರೂ ಬಂದಿಲ್ಲ. ಹೀಗಾಗಿ, ಅವರನ್ನು ಖಾಸಗಿ ವಾಹನದಲ್ಲಿ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಹೆರಿಗೆಯೂ ಆಗಿದೆ. ಆದರೆ, ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿದ್ದ ಕಾರಣಕ್ಕೆ ಅವರನ್ನು ಸಾಗರ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಗಿದೆ. ನಡುರಾತ್ರಿಯೇ ಲಾಂಚ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ನವಜಾತ ಶಿಶು ಗುರುವಾರ ಬೆಳಗ್ಗೆ ಮೃತಪಟ್ಟಿದೆ.

ಇನ್ನೊಂದು ಪ್ರಕರಣದಲ್ಲಿ ತುಮರಿ ಸಮೀಪ ರಾತ್ರಿ ಬೈಕ್ ಅಪಘಾತ ಸಂಭವಿಸಿದೆ. ಇದರಲ್ಲಿ ನಾರಾಯಣ್(32) ಎನ್ನುವವರು ಮೃತಪಟ್ಟಿದ್ದಾರೆ. ಇದಕ್ಕೂ ಸರಿಯಾದ ಸಮಯದಲ್ಲಿ ಆಂಬ್ಯುಲೆನ್ಸ್ ಸಿಗದಿರುವುದೇ ಕಾರಣ. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಾಕಷ್ಟು ಪರದಾಡಿದ ನಂತರ ಸಿಗಂದೂರು ಶ್ರೀ ಕ್ಷೇತ್ರದ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಾರಾಯಣ್ ಮೃತಪಟ್ಟಿದ್ದಾರೆ.

https://www.suddikanaja.com/2021/09/25/ambulance-service-collapsed/

error: Content is protected !!