ಸುದ್ದಿ ಕಣಜ.ಕಾಂ | KARNATAKA | EDUCATION CORNER
ಶಿವಮೊಗ್ಗ: ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಮತ್ತು ಎಲ್ಸ್ ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಡಾ. ಜೆ.ಜಿ ಮಂಜುನಾಥ್ ಅವರು ಸ್ಥಾನ ಪಡೆದಿದ್ದಾರೆ.
READ | ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಗೆ ಸ್ಥಾನ, ಇಬ್ಬರು ಪ್ರಾಧ್ಯಾಪಕರ ಸಾಧನೆಗೆ ಮೆಚ್ಚುಗೆ
ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಕೊಡಗು ಜಿಲ್ಲೆ ಮಡಿಕೇರಿಯಲ್ಲಿನ ರಾಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜೆ.ಜಿ. ಮಂಜುನಾಥ್ ಅವರು 2021ರ ಸಾಲಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ 24,574ನೇ ಸ್ಥಾನವನ್ನು ಪಡೆದಿದ್ದು, ಈ ಮೂಲಕ ವಿಶ್ವದ ವ್ಯಕ್ತಿ ಜೀವಮಾನ ಸಾಧಕರ ಪಟ್ಟಿಯಲ್ಲಿ 1,97,749ನೇ ಸ್ಥಾನವನ್ನು ಪಡೆದಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆಯವರು
ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಜಂಬಳ್ಳಿ ಗ್ರಾಮದವರಾಗಿದ್ದು, ‘ಅನಲೈಟಿಕಲ್ ಮತ್ತು ಏನರ್ಜಿ’ ವಿಷಯಗಳ ಕುರಿತು ಸಾಕಷ್ಟು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ.
ಸತತ 2 ವರ್ಷ ಕರ್ನಾಟಕದಿಂದ ಈ ಸಾಧನೆಗೈದ ಶ್ರೀಯುತ ಡಾ ಮಂಜುನಾಥ್ ಅವರು ಹೊಸನಗರ ಕೀರ್ತಿಯನ್ನ ರಾಷ್ಟ್ರಮಟ್ಟದ್ದಲ್ಲಿ ಹೆಚ್ಚಿಸಿದ್ದಾರೆ.
ಇವರ ಸಾಧನೆಗೆ ಮಂಗಳೂರು ವಿವಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಕಾಲೇಜು ಆಡಳಿತ ಮಂಡಳಿ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು ಅಭಿನಂದಿಸಿದ್ದಾರೆ.
https://www.suddikanaja.com/2021/10/14/areca-palms-suffers-from-fungal-disease-no-need-to-worry-scientist-said/