ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಕುಟುಂಬದಲ್ಲಿನ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೊಮ್ಮನಕಟ್ಟೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಆಶ್ರಯ ಬಡಾವಣೆ ಬೊಮ್ಮನಕಟ್ಟೆಯ ನಿವಾಸಿ ಟಿ.ಗುರುಪ್ರಸಾದ್(26) ಕೊಲೆಯಾದ ವ್ಯಕ್ತಿ. ಈತನ ಸಹೋದರ ವಿಶ್ವನಾಥ್ ಕೊಲೆ ಮಾಡಿದ್ದಾನೆ.
ಮಾತಿಗೆ ಮಾತು ಬೆಳೆದು ವಿಶ್ವನಾಥನು ಗಾರೆ ಕೆಲಸಕ್ಕೆ ಬಳಸುವ ಮಟ್ಟಗೋಲನ್ನು ತೆಗೆದುಕೊಂಡು ಗುರುಪ್ರಸಾದ್ ನ ತಲೆ ಮತ್ತು ಬಲಗಿವಿಗೆ ಹಲ್ಲೆ ನಡೆಸಿದ್ದು ಪರಿಣಾಮ ಗುರುಪ್ರಸಾದ್ ನ ತಲೆ ಮತ್ತು ಕಿವಿಯಲ್ಲಿ ರಕ್ತ ಸ್ರಾವವಾಗಿ ಮೃತಪಟ್ಟಿದ್ದಾನೆ. ವಿನೋಬನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
https://www.suddikanaja.com/2021/02/02/increase-in-number-of-family-disputes-in-shivamogga-at-covid-time/