ಕಾರ್ಗಲ್ ಪೊಲೀಸರ ಭರ್ಜರಿ ದಾಳಿ, ನೀತಿ ಸಂಹಿತೆ ಮೀರಿದವರಿಗೆ ಶಾಕ್

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ನೀತಿಸಂಹಿತೆ ಉಲ್ಲಂಘಿಸಿದವರಿಗೆ ಕಾರ್ಗಲ್ ಪೊಲೀಸರು ಬಿಸಿಮುಟ್ಟಿಸಿದ್ದಾರೆ. ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮದ್ಯ ಸಂಗ್ರಹಿಸಿಟ್ಟಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, ಅಂದಾಜು 25 ಸಾವಿರ ರೂ. ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ.

ಎಸ್.ಪಿ ಬಿ.ಎಂ.ಲಕ್ಷ್ಮಿಪ್ರಸಾದ್, ಹೆಚ್ಚುವರಿ ಎಸ್.ಪಿ. ಎಚ್.ಟಿ.ಶೇಖರ್ ಆದೇಶದನ್ವಯ ಕಾರ್ಗಲ್ ಠಾಣೆ ಪಿ.ಎಸ್.ಐ ತಿರುಮಲೇಶ್ ನೇತೃತ್ವದಲ್ಲಿ ಸಾಗರ ಡಿಎಸ್‍ಪಿ. ರೋಹನ್ ಜಗದೀಶ್, ಕಾರ್ಗಲ್ ಠಾಣೆಯ ವೃತ್ತ ನಿರೀಕ್ಷಕ ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಪಿಎಸ್.ಐ ತಿರುಮಲೇಶ್, ಸಿಬ್ಬಂದಿರಾಘವೇಂದ್ರ, ಫೈರೋಜ್ , ಶ್ರೀನಿವಾಸ್ ಇತರರು ದಾಳಿ ನಡೆಸಿದ್ದಾರೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!