ಬೈಕ್ ತಡೆದು ನಿಲ್ಲಿಸಿದಾಗ ಶಾಕ್, ಬ್ಯಾಗ್‍ನಲ್ಲಿತ್ತು ರಾಶಿ ರಾಶಿ ಕದ್ದ ಮೊಬೈಲ್!

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಕಳ್ಳತನ ಮಾಡಿದ ಮೊಬೈಲ್ ಫೋನ್ ಗಳನ್ನು ಭದ್ರಾವತಿಯಲ್ಲಿ ಮಾರಾಟ ಮಾಡಲು ಬರುತ್ತಿದ್ದ ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ.
ಸೀಗೇಬಾಗಿಯ ಹತ್ತಿರ ಚನ್ನಗಿರಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಆರೋಪಿಗಳ ಪೊಲೀಸರ ಕೈಗೆ ಸಿಕ್ಕಿದ್ದಾರೆ.

ಭದ್ರಾವತಿಯ ಭೋವಿ ಕಾಲೊನಿ ನಿವಾಸಿ ಶ್ರೀನಿವಾಸ್ (26), ದುರ್ಗಿನಗರ ಅಜಾಮ್ ಅಲಿಯಾಸ್ ಬಾಬು (38) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಅಂದಾಜು 11,00,000 ರೂಪಾಯಿ ಮೌಲ್ಯದ ಒಟ್ಟು 120 ಸಂಖ್ಯೆಯ ವಿವಿಧ ಕಂಪನಿಯ ಮೊಬೈಲ್ ಫೆÇೀನ್, ಡೆಲ್ ಕಂಪನಿಯ 1 ಲ್ಯಾಪ್ ಟಾಪ್ ಹಾಗೂ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ನಡೀತು ರೇಡ್
ಮೊಬೈಲ್ ಮಾರಾಟ ಮಾಡಲು ಬರುತಿದ್ದ ಚನ್ನಗಿರಿ ಕಡೆಯಿಂದ ಭದ್ರಾವತಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಭದ್ರಾವತಿ ಹಳೆನಗರ ಪೆÇಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ತಂಡವು ದಾಳಿ ನಡೆಸಿದೆ.
ತಡೆದು ನಿಲ್ಲಿಸಿದಾಗ ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು ಬಂದಿದ್ದು, ಅನುಮಾನ ಬಂದು ಅವರನ್ನು ತಡೆದು ಪರಿಶೀಲನೆ ಮಾಡಿದಾಗ ಬಟ್ಟೆ ಬ್ಯಾಗ್ ರಾಶಿ ರಾಶಿ ಮೊಬೈಲ್ ಗಳು ಸಿಕ್ಕಿವೆ. ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.suddikanaja.com/2021/07/14/accused-arrest/

error: Content is protected !!