Award announce | ಶಿವಮೊಗ್ಗದಲ್ಲಿ ಮೂರು ಪ್ರಮುಖ ಪ್ರಶಸ್ತಿಗಳ ಘೋಷಣೆ, ಯಾರೆಲ್ಲ ಆಯ್ಕೆ?

Breaking news

 

 

ಸುದ್ದಿ ಕಣಜ.ಕಾಂ ಸಾಗರ
SAGAR: 2023-24ನೇ ಸಾಲಿನ ಪರಸ್ಪರ ಸಾಹಿತ್ಯ ವೇದಿಕೆ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಲಾಗಿದೆ. ನಗರದ ವರದ ಸಭಾಂಗಣದಲ್ಲಿ ಜ.14ರಂದು ಬೆಳಗ್ಗೆ1 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಾಹಿತಿ ಡಾ.ನಾ.ಡಿಸೋಜ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

READ | ಜ.17ರಿಂದ. ಸರಕು ಸಾಗಣೆ ವಾಹನಗಳ ಸೇವೆ ಸ್ಥಗಿತ, ಕಾರಣವೇನು?

ಯಾರಿಗೆಲ್ಲ ಪ್ರಶಸ್ತಿ ಪ್ರದಾನ?
ಎಫ್.ಕಿಟೆಲ್ ಪ್ರಶಸ್ತಿಯನ್ನು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ, ಅಕ್ಕಮಹಾದೇವಿ ಪ್ರಶಸ್ತಿಯನ್ನು ಕವಿ ಮತ್ತು ಅಂಕಣಗಾರ್ತಿ ಡಾ. ಸಬಿತಾ ಬನ್ನಾಡಿ, ಸಂತ ಶಿಶುನಾಳ ಶರೀಫ್ ಪ್ರಶಸ್ತಿಯನ್ನು ರಾಯಚೂರು ಜಿಲ್ಲೆಯ ಸುಪ್ರಸಿದ್ದ ಕವಿ ಆರಿಫ್‌ ರಾಜಾ ಅವರಿಗೆ ಪ್ರದಾನ ಪ್ರದಾನ ಮಾಡಲಾಗುತ್ತಿದೆ.
ಕಳೆದ‌ ನಾಲ್ಕು ವರ್ಷಗಳಿಂದ ಪ್ರಶಸ್ತಿ ಪ್ರದಾನ
ವೇದಿಕೆ ಅಧ್ಯಕ್ಷ ಡಾ. ಸರ್ಫ್ರಾಜ್ ಚಂದ್ರಗುತ್ತಿ ಮಾತನಾಡಿ, ವೇದಿಕೆ ಪ್ರಾರಂಭವಾಗಿ 2 ದಶಕವಾಗಿದೆ. ಕಳೆದ ನಾಲ್ಕು ವರ್ಷದಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಶಸ್ತಿಯು ₹10 ಸಾವಿರ ನಗದು, ಸನ್ಮಾನ ಪತ್ರ ಒಳಗೊಂಡಿರುತ್ತದೆ. ಗೋಷ್ಠಿಯಲ್ಲಿ ಪ್ರಮುಖರಾದ ದತ್ತಾತ್ರೇಯ ಬೊಂಗಾಳೆ, ಎಸ್.ಎಂ. ಗಣಪತಿ, ಎಂ.ಸಿ. ವೀರಪ್ಪ ಇದ್ದರು.

error: Content is protected !!