ಶಿವಮೊಗ್ಗ ನಗರದ ಶಾಲೆಗಳಿಗೆ 3 ದಿನ ರಜೆ, ಭಾನುವಾರ ಮತ್ತೊಂದು ಪ್ರಮುಖ ಸಭೆ

 

 

ಸುದ್ದಿ ಕಣಜ.ಕಾಂ | DISTRICT | SCHOOLS CLOSE
ಶಿವಮೊಗ್ಗ: ನಗರದಲ್ಲಿ ಕೊರೊನಾ ವೈರಸ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಶಾಲೆಗಳಿಗೆ ಮೂರು ದಿನಗಳ ಕಾಲ ರಜೆ ನೀಡಲು ನಿರ್ಧರಿಸಲಾಗಿದೆ.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, 1ರಿಂದ 9ನೇ ತರಗತಿವರೆಗಿನ ಶಾಲೆಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ.

ಭಾನುವಾರದ ಸಭೆಯಲ್ಲಿ ನಿರ್ಧಾರ
ಇದುವರೆಗೆ 45 ಶಾಲೆಗಳ 208 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈಗಾಗಲೇ ನಗರದಲ್ಲಿರುವ ಹಲವು ಶಾಲೆಗಳಿಗೆ ರಜೆ ಕೂಡ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಕುರಿತು ಭಾನುವಾರದಂದು ಸಭೆಯನ್ನು ಕರೆಯಲಾಗಿದೆ. ಅಂದು ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ನಗರದ ಶಾಲೆಗಳಿಗೆ ಮಾತ್ರ ರಜೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಮೂರು ದಿನ ರಜೆ, ಸೋಮವಾರ ಶಾಲೆ ಶುರು

ಬುಧವಾರದಿಂದ ಶುಕ್ರವಾರದವರೆಗೆ ನಗರದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ, ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಇರುವುದರಿಂದ ಅಂದೂ ಸಹ ಶಾಲೆಗಳಿಗೆ ರಜೆ ಇರಲಿದೆ. ಹೀಗಾಗಿ, ಒಟ್ಟು ಐದು ದಿನಗಳು ರಜೆ ನೀಡಿದಂತಾಗಲಿದೆ. ಸೋಮವಾರದಿಂದ ಯಥಾಪ್ರಕಾರ ಶಾಲೆಗಳು ಪುನರಾರಂಭಗೊಳ್ಳಲಿವೆ ಎಂದು ಹೇಳಿದರು.

https://www.suddikanaja.com/2021/10/25/school-re-open-in-shivamogga/

error: Content is protected !!