ಪಿಳ್ಳಂಗಿರಿಯಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿ ನಾಪತ್ತೆ

 

 

ಸುದ್ದಿ ಕಣಜ.ಕಾಂ‌ | TALUK | MISSING NEWS
ಶಿವಮೊಗ್ಗ: ತಾಲೂಕಿನ ಪಿಳ್ಳಂಗಿರಿಯಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿಯೊಬ್ಬರು ವಾಪಸ್ ಮನೆಗೆ ತೆರಳಿಲ್ಲ.
ಪಿಳ್ಳಂಗಿರಿ ನಿವಾಸಿ ರಾಮಣ್ಣ ಪಕೀರಪ್ಪ ಅವರ ಮಗ ವಿಠಲ್ ಎಂಬ ವ್ಯಕ್ತಿಯು 2021ರ ಸೆಪ್ಟೆಂಬರ್ 7ರಿಂದ‌ ನಾಪತ್ತೆಯಾಗಿದ್ದಾರೆ.

READ | ನರಸೀಪುರ ನಾಟಿ ಔಷಧ ವಿತರಣೆ ಬಂದ್

ವಿಠಲ್ ಸುಮಾರು 5.2 ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡನೆ ಮುಖ, ಕಪ್ಪು ಕೂದಲು, ಬಲ ಮೂಗಿನ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಬಾದಮಿ ಬಣ್ಣದ ಚೆಕ್ಸ್ ಶರ್ಟ್ ಹಾಗೂ ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ಇಂಗ್ಲೀಷ್, ಹಿಂದಿ ಭಾಷೆ ಮಾತನಾಡುತ್ತಾರೆ. ಯಾರಿಗಾದರೂ ಇವರ ಸುಳಿವು ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪ್ರಕಟಣೆ ತಿಳಿಸಿದೆ.

error: Content is protected !!