10ನೇ, 4ನೇ ಪಾಸ್ ಆದವರಿಗೆ ಶಿವಮೊಗ್ಗದಲ್ಲಿ ಉದ್ಯೋಗ, ತಾಲೂಕುವಾರು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿಗೆ ಅರ್ಜಿ

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ಜಿಲ್ಲೆಯಲ್ಲಿ ವಿವಿಧ ಅಂಗನವಾಡಿ(anganwadi recruitment)ಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತೀರ್ಥಹಳ್ಳಿ | ತೀರ್ಥಹಳ್ಳಿಯಲ್ಲಿ ಚಿಡುವ(ಮಿನಿ) ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಹುದ್ದೆ ಹಾಗೂ ಹಾರೇಕೊಪ್ಪ, ತಲ್ಲೂರಂಗಡಿ, ಲಕ್ಕುಂದ, ತಿಲಕಮಂಟಪ, ಬಾಂಡ್ಯ, ಮೇಗರವಳ್ಳಿ ಚೌಕ, ಶಿರಗಾರು, ಸಾಲ್ಗಡಿ, ಅಂಗಳಗೂಡಿಗೆ, ಆಗುಂಬೆ ರಸ್ತೆ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆ.

ಹೊಸನಗರ | ತಾಲೂಕಿನ ಮಿನಿ ಅಂಗನವಾಡಿ ಕಾರ್ಯಕರ್ತೆ 2 ಹುದ್ದೆಗಳು, ದೇವಿಕೊಪ್ಪ ಮತ್ತು ಏರಿಸೀಮೆ, ಅಂಗನವಾಡಿ ಸಹಾಯಕಿಯರು 4 ಹುದ್ದೆಗಳು, ಚಂದಾಳದಿಂಬ, ಚಂದಳ್ಳಿ, ಕರಿನಗೊಳ್ಳಿ ಮತ್ತು ಕೊಳಗಿ ಗ್ರಾಮಗಳು.
ಭದ್ರಾವತಿ | ಭದ್ರಾವತಿ ತಾಲ್ಲೂಕಿನಲ್ಲಿ ಖಾಲಿ ಇರುವ 4 ಅಂಗನವಾಡಿ ಕಾರ್ಯಕರ್ತೆಯರು ಮತ್ತು 19 ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ. ಹಾವುಗೊಲ್ಲರಕ್ಯಾಂಪ್ ಮಿನಿ, ಚಿಕ್ಕಗೊಪ್ಪೆನಹಳ್ಳಿ, ಸಿಂಗನ ಮನೆ-2, ಹೊಸೂರು ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 4 ಕಾರ್ಯಕರ್ತೆಯರ ಹುದ್ದೆ, ಅಂಗನವಾಡಿ ಕೇಂದ್ರಗಳಾದ ಸಿದ್ದರಹಳ್ಳಿ(ಪ.ಜಾ), ದೊಣಭಘಟ್ಟ-4, ಸಿಂಗನಮನೆ-2, ಶಾಂತಿನಗರ-1, ನಾಗಸಮುದ್ರ-1, ಸುರಗಿತೋಪು-1, ಮೂಫಾಕಾಂಪೌಂಡ್, ಸೀಗೆಬಾಗಿ-3, ಫಿಲ್ಟರ್ಶೆಡ್, ಸಂಜಯ್ಕಾಲೋನಿ, ಹುತ್ತಾಕಾಲೋನ್, ಅಶೋಕ ನಗರ-2, ಅರದೊಟ್ಟಲು, ಎಂ ಎಂ ಕಾಂಪೌಡ್, ಅರಳೀಹಳ್ಳಿ-1, ನೆಹರೂನಗರ, ಸಣ್ಣಕುರುಬರ ಬೀದಿ, ಹಳೇಕೂಡ್ಲಿಗೆರೆ(ಪ.ಜಾತಿ) ಮತ್ತು ವೇಲೂರ್ ಶೆಡ್-1 ಗಳಲ್ಲಿ 19 ಅಂಗನವಾಡಿ ಸಹಾಯಕಿರಯರ ಹುದ್ದೆ.
ಸೊರಬ | ಸೊರಬ ತಾಲ್ಲೂಕು ಶಿಶು ಅಭಿವೃದ್ದಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಪುರದೂರು, ಚಾಮರಾಜಪೇಟೆ ಮಿನಿ (ವಾ.ನಂ.:5), ಹಿರೇಕಬ್ಬೂರು ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಮತ್ತು ಜೋಗಿಹಳ್ಳಿ, ತಾವರೆಹಳ್ಳಿ, ಕುಳುವಳ್ಳಿ, ಇಂಡುವಳ್ಳಿ, ಬಿ-ಇಂಡುವಳ್ಳಿ, ಚಗಟೂರು, ಮೂಡಿ-1, ಯಲಸಿ-1, ಬನದಕೊಪ್ಪ, ತಲಕಾಲುಕೊಪ್ಪ, ಬಂಗಾರಪ್ಪ ಬಡಾವಣೆ (ವಾ.ನಂ.:2) ಹಾಗೂ ಓಟೂರುನಲ್ಲಿ ಸಹಾಯಕಿಯರ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಸಾಗರ | ಸಾಗರದ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ತಾವರೇಹಳ್ಳಿ, ಬರೂರು, ಕೊಳೆಗೋಡು(ಮಿನಿ), ಕಾನಗೋಡು+ಬೆನವಗೋಡು(ಮಿನಿ), ಮಡಸೂರು, ವಡಂಬೈಲು, ಕಾರೇಹೊಂಡ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಂದಾಸುರ, ಕೆರೆಹಿತ್ಲು, ಲಕ್ಕವಳ್ಳಿ, ಬರೂರು, ದೊಡ್ಡಬ್ಯಾಣ, ಸಂಗಣ್ಣನಕೆರೆ, ನಂದೀತಳೆ, ಅಡೂರು ಇಲ್ಲಿ ಹುದ್ದೆಗೆ ಅರ್ಜಿ ಆಹ್ವಾನ.

ಶಿವಮೊಗ್ಗ | ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯ ಸೋಮಿನಕೊಪ್ಪ-1, ಹರಪನಹಳ್ಳಿ ಕ್ಯಾಂಪ್ ಮಿನಿ, ಗುಡ್ಡದ ಅರಕೆರೆ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಮತ್ತು ಕಲ್ಲೂರು, ವೀರಣ್ಣನ ಬೆನವಳ್ಳಿ, ಹೊಳೆಹನಸವಾಡಿ, ದೇವಕಾತಿಕೊಪ್ಪ, ಚಿಕ್ಕದಾನವಂದಿ, ರಾಗಿಹೊಸಳ್ಳಿ, ಪುರಲೆ-1, ಗಾಡಿಕೊಪ್ಪ-1 ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದವರು ಹಾಗೂ ಸಹಾಯಕಿಯರ ಹುದ್ದೆಗೆ 4ನೇ ತರಗತಿ ಉತ್ತೀರ್ಣರಾದ 18-35 ವರ್ಷ ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ವೆಬ್ ಸೈಟ್  www.anganwadirecruit.kar.nic.in  ನಲ್ಲಿ ಆನ್ ಲೈನ್ ಮೂಲಕ ಫೆಬ್ರವರಿ 13ರೊಳಗಾಗಿ ಸಲ್ಲಿಸುವಂತೆ ತಿಳಿಸಲಾಗಿದೆ.

NOTIFICATION

WEBSITE

https://www.suddikanaja.com/2022/01/12/jobs-in-shivamogga-anganwadi-recruitment-2022/

error: Content is protected !!