100ಕ್ಕೂ ಅಧಿಕ ನೆಲಬಾಂಬ್ ಸ್ಫೋಟಕ ಪತ್ತೆ ಹಚ್ಚಿದ ಮಗವಾ ಇಲಿ ಸಾವು, ಏನಿದರ ವಿಶೇಷ?

 

 

ಸುದ್ದಿ ಕಣಜ.ಕಾಂ |  INTERNATIONAL | HUMAN INTEREST
ಕಾಂಬೋಡಿಯಾ( Cambodia): ನೆಲಬಾಂಬ್ ಸ್ಫೋಟಕ (landmines and other explosives)ಗಳನ್ನು ಪತ್ತೆ ಹಚ್ಚುವಲ್ಲಿ ಅವಿರತ ಕೊಡುಗೆ ನೀಡಿರುವ ಅಪರೂಪ ತಳಿಯ ‘ಮಗವಾ ಇಲಿ’ (Magawa rat) ನಿಧನ ಹೊಂದಿದೆ. ವಿಶೇಷವೆಂದರೆ, ಈ ಇಲಿಯನ್ನು ಹಿರೋ ರ‌್ಯಾಟ್ (hero rat) ಎಂದೇ ಕರೆಯಲಾಗುತಿತ್ತು.

ಐದು ವರ್ಷದ ಸರ್ವಿಸ್ ನಲ್ಲಿ 100ಕ್ಕೂ ಅಧಿಕ ಬಾಂಬ್ ಪತ್ತೆ

ಇಂಟರ್ ನ್ಯಾಷನಲ್ ಚಾರಿಟಿ ಸಂಸ್ಥೆಯು (APOPO) ಈ ಇಲಿಯನ್ನು ನೆಲ ಬಾಂಬ್ ಪತ್ತೆಗೆ ಬಳಸಿಕೊಂಡಿತ್ತು. ಇದು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಸ್ಫೋಟಕದಿಂದ ಆಗಬಹುದಾಗಿದ್ದ ಮಹಾ ದುರಂತಗಳನ್ನು ತಪ್ಪಿಸಿತ್ತು.
ತಾಂಜೇನಿಯಾದ ಸೊಕೊಯಿನೆ ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಕ್ಯಾಂಪಸ್ ನಲ್ಲಿ 2013ರ ನವೆಂಬರ್ ನಲ್ಲಿ ಜನಿಸಿದ್ದ ಇಲಿಯು 9ನೇ ವಯಸ್ಸಿನಲ್ಲಿ ನಿಧನ ಹೊಂದಿದೆ. ಕಳೆದ ಒಂದು ವಾರದಿಂದ ಅಧಿಕ ನಿದ್ದೆ ಮಾಡುತ್ತಿದ್ದ ಹಾಗೂ ಆಹಾರ ಸೇವನೆಯನ್ನೂ ಕಡಿಮೆ ಮಾಡಿತ್ತು.

ಏನು ಈ ಇಲಿಯ ವಿಶೇಷತೆ?
  • ಒಂದು ಟೆನಿಸ್ ಕೋರ್ಟ್ ಗಾತ್ರದ ಪ್ರದೇಶದಲ್ಲಿ ನೆಲಬಾಂಬ್ ಹುದುಗಿಸಿಟ್ಟಲ್ಲಿ ಅದನ್ನು ಹುಡುಕಲು ಮನುಷ್ಯರಿಗೆ ನಾಲ್ಕು ದಿನಗಳಾದರೂ ಬೇಕು. ಆದರೆ, ಈ ಇಲಿ 20 ನಿಮಿಷಗಳಲ್ಲಿ ಸ್ಫೋಟಕವನ್ನು ಪತ್ತೆ ಹಚ್ಚುತ್ತದೆ. ಇದೇ ಕಾರಣಕ್ಕಾಗಿಯೇ ಈ ಇಲಿ ಎಂದರೆ ಎಲ್ಲರಿಗೂ ಪ್ರೀತಿ ಇತ್ತು. ಇದರ ಕಾರ್ಯಕ್ಷಮತೆ ಶ್ರೇಷ್ಠವಾಗಿತ್ತು.
  • ಈ ಇಲಿಗೆ ಪಿಡಿಎಸ್.ಎ ಗೋಲ್ಡ್ ಮೆಡಕಲ್ ಪಡೆದು ಗಿನ್ನಿಸ್ ದಾಖಲೆಯನ್ನೂ ಸೃಷ್ಟಿಸಿದೆ.

https://www.suddikanaja.com/2021/11/05/actual-meaning-of-badarayana-sambandha/

error: Content is protected !!