KSRTC ಬಸ್ ನಲ್ಲೇ ಕೊನೆಯುಸಿರು ಎಳೆದ ಚಾಲಕ

 

 

ಸುದ್ದಿ‌ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಕೆಎಸ್.ಆರ್.ಟಿಸಿ ಬಸ್ ನಲ್ಲಿ ಲಾರಿ ಚಾಲಕರೊಬ್ಬರು ಶನಿವಾರ ಮೃತಪಟ್ಟಿದ್ದಾರೆ.
ಹರಿಯಾಣದ ಉಮ್ರಾ ಗ್ರಾಮದ ಅರ್ಷದ್ (36) ಮೃತರು. ಇವರು ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬಸ್ ನಲ್ಲಿ ಬರುತ್ತಿದ್ದಾಗ ಏಕಾಏಕಿ ಅಸ್ವಸ್ಥರಾಗಿದ್ದಾರೆ. ತುರ್ತು ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.

READ | ‘ಓಂ ಶಕ್ತಿ’ ಪ್ರವಾಸಿಗರಿಂದ ಶಿವಮೊಗ್ಗದಲ್ಲಿ ಕೋವಿಡ್ ಹೈ ರಿಸ್ಕ್, ಇದುವರೆಗೆ ಎಷ್ಟು ಜನರಿಗೆ ಸೋಂಕು ತಗುಲಿದೆ?

ಎರಡು‌ ದಿನಗಳ ಹಿಂದೆ ಬೆಂಗಳೂರಿಗೆ ಲಾರಿಯಲ್ಲಿ ಸರಕು ತಂದಿದ್ದ ಅರ್ಷದ್ ಅವರು ಚಿತ್ರದುರ್ಗ ಮಾರ್ಗವಾಗಿ ಬರುತ್ತಿದ್ದರು. ಆದರೆ, ಲಾರಿಯನ್ನು ಚಿತ್ರದುರ್ಗದಲ್ಲೇ ನಿಲ್ಲಿಸಿ ಬಸ್ ಮೂಲಕ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಅಸ್ವಸ್ಥರಾಗಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸಂಬಂಧಿಕರು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

error: Content is protected !!