WeDun ನಲ್ಲಿ ಔಷಧ, ದಿನಸಿ, ಮಾಂಸ ಸೇರಿ 8 ಸೇವೆಗಳ ಹೋಮ್ ಡೆಲಿವರಿ, ಶಿವಮೊಗ್ಗ ಪ್ರತಿಭೆಗಳ ಸಾಧನೆ, ಯಾವ ಸಮಯದಲ್ಲಿ ಲಭ್ಯ

 

 

ಸುದ್ದಿ ಕಣಜ.ಕಾಂ | DISTRICT | TALENT JUNCTION
ಶಿವಮೊಗ್ಗ: ಹೋಟೆಲ್ ತಿಂಡಿ-ತಿನಿಸು, ಮಾಂಸ, ಮೀನು, ದಿನಸಿ ಸಾಮಗ್ರಿ, ಅಗತ್ಯ ಔಷಧ, ಸಾಕುಪ್ರಾಣಿಗಳ ಸಾಮಗ್ರಿ, ಗಿಫ್ಟ್….. ಯಾವುದೇ ಅಗತ್ಯವಿರಲಿ, ಅದಕ್ಕೆ ವೀ ಡನ್ (Wedun) ಆಪ್ (app) ಮೂಲಕ ಬುಕ್ ಮಾಡಿದರೆ ಸಾಕು. ಅದು ಮನೆ ಬಾಗಿಲಿಗೆ ತಲುಪಲಿದೆ.
ಜನವರಿ 10ರಿಂದ ಆಪ್ ಕಾರ್ಯಾರಂಭಗೊಂಡಿದ್ದು, ಇದನ್ನು ಶಿವಮೊಗ್ಗದ ಎಂಜಿನಿಯರಿಂಗ್ ಪದವೀಧರರು ಸೇರಿ ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಗ್ರಾಹಕರಿಗೆ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸಲು ಇದು ಸಹಕಾರಿಯಾಗಲಿದೆ ಎಂದು ಸಂದೀಪ್ ಮಾಹಿತಿ ನೀಡಿದರು.

ಸೋಮವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಗ್ರಾಹಕರು ಮತ್ತು ಉತ್ಪಾದಕರ ನಡುವೆ ‘ವೀ ಡನ್’ ಆಪ್ ಸೇತುವೆಯಾಗಿ ಕೆಲಸ ಮಾಡಲಿದೆ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಔಷಧಕ್ಕಾಗಿ ವಯೋವೃದ್ಧರು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಅವರಿಗೂ ವಿಶೇಷವಾಗಿ ಇದು ಸಹಕಾರಿಯಾಗಲಿದೆ ಎಂದರು.

ಆಪ್ ನಲ್ಲಿ ಏನೇನು ಸೇವೆ ಲಭ್ಯ?
ಹೋಟೆಲ್ ತಿಂಡಿ- ತಿನಿಸು, ಅಗತ್ಯ ಔಷಧಿಗಳು, ಸಾಕು ಪ್ರಾಣಿ ಸಾಮಗ್ರಿ ಪೂರೈಕೆ, ನಗರದ ಯಾವುದೇ ಅಂಗಡಿಯಲ್ಲಿ ವಸ್ತುಗಳ ಖರೀದಿ, ದಿನಸಿ ಸಾಮಗ್ರಿ, ಮಾಂಸ, ಮೀನು, ಉಡುಗೊರೆ, ಪ್ಯಾಕೇಜ್ ಗಳನ್ನು ಕಳುಹಿಸುವುದು.. ಇಂತಹ ಹಲವು ಸೇವೆಗಳನ್ನು ನೀಡಲಾಗುವುದು.
ಪ್ರಸ್ತುತ ಈ ಸೇವೆಯು ಬೆಳಗ್ಗೆ 6 ರಿಂದ ರಾತ್ರಿ 11 ಗಂಟೆಯವರೆಗೆ ಲಭ್ಯವಿದ್ದು, ಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಣೆ ಮಾಡುವ ಯೋಚನೆ ಇದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕಿರಣ್, ಅಮೃತ್, ಚಿಟ್ಟಿಬಾಬು ಉಪಸ್ಥಿತರಿದ್ದರು.

https://www.suddikanaja.com/2021/12/08/doddapete-police-raided-a-house-that-was-selling-meat-cutting-cow-and-buffaloes-the-accused-fled-after-observing-the-police-at-shivamogga/

error: Content is protected !!