ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರೈಲು ಎಂದರೆ ಸಮಯದ ಬಗ್ಗೆ ಕೇಳಬೇಕೇ ಎಂದು ಮೂಗು ಮುರಿಯುವವರು ಇನ್ಮೇಲೆ ಮರು ಯೋಚಿಸಲೇಬೇಕು. ಕಾರಣ, ನೈರುತ್ಯ ರೈಲ್ವೆ ಸಮಯ ಪ್ರಜ್ಞೆಯಲ್ಲಿ ನಂ.1 ಸ್ಥಾನ ಗಳಿಸಿದೆ.
ಭಾರತೀಯ ರೈಲ್ವೆಯ ಎಲ್ಲ ವಿಭಾಗಗಳಿಗೆ ಹೋಲಿಸಿದರೆ ನೈರುತ್ಯ ರೈಲ್ವೆ ನಂ.1 ಸ್ಥಾನ ಗಳಿಸಿದ್ದು, ಹೆಗ್ಗಳಿಕೆಗೆ ಪಾತ್ರವಾಗಿದೆ. ನೈರುತ್ಯ ರೈಲ್ವೆಯು ಅಕ್ಟೋಬರ್ ತಿಂಗಳಲ್ಲಿ ತನ್ನ ವ್ಯಾಪ್ತಿಯ ರೈಲುಗಳ ಸಂಚಾರ ಸಮಯದಲ್ಲಿ ಶೇ.95.2ರಷ್ಟು ಸಮಯಪ್ರಜ್ಞೆ ಸಾಧಿಸಿದೆ.
READ | ಶಿವಮೊಗ್ಗದಲ್ಲಿ ವಿಮಾನಯಾನ ಕಂಪನಿಯಿಂದ ಉದ್ಯೋಗ, ಯಾರೆಲ್ಲ ಪಾಲ್ಗೊಳ್ಳಬಹುದು?