ಭದ್ರಾವತಿಯಲ್ಲಿ ಮಕ್ಕಳಿಗಾಗಲಿದ್ದ ಅಪಘಾತ ತಪ್ಪಿಸಲು ಹೋಗಿ ಲಾರಿ ಪಲ್ಟಿ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಮಕ್ಕಳಿಗೆ ಆಗಲಿದ್ದ ಅಪಘಾತವನ್ನು ತಪ್ಪಿಸಲು ಹೋದಾಗ ಲಾರಿಯೊಂದು ಪಲ್ಟಿಯಾಗಿರುವ ಘಟನೆ ಶನಿವಾರ ನಡೆದಿದೆ.

ಬೈಪಾಸ್ ರಸ್ತೆಯ ಸಿರಿಯೂರು ವೀರಾಪುರ ಗ್ರಾಮದ ಸಮೀಪದ ಘಟನೆ ನಡೆದಿದ್ದು, ಲಾರಿಯನ್ನು ಬೇರೆಡೆಗೆ ತಿರುಗಿಸದಿದ್ದಲ್ಲಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಮಕ್ಕಳು ಬರುತ್ತಿರುವುದನ್ನು ಕಂಡು ಬೇರೆಡೆಗೆ ಲಾರಿಯನ್ನು ತಿರುಗಿಸಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಲಾರಿಯಲ್ಲಿ ಮೈಸೂರಿಗೆ ಪ್ಲಾಸ್ಟಿಕ್ ತುಂಬಿಕೊಂಡು ಹೋಗಲಾಗುತಿತ್ತು ಎಂದು ತಿಳಿದುಬಂದಿದೆ.

error: Content is protected !!