ನಿರಂತರ ಜ್ಯೋತಿ ಅವ್ಯವಹಾರ, ಜೆಇ, ಎಇ ಸಸ್ಪೆಂಡ್

 

 

ಸುದ್ದಿ ಕಣಜ.ಕಾಂ | DISTRICT | MESCOM
ಶಿವಮೊಗ್ಗ: ನಿರಂತರ ಜ್ಯೋತಿ ಕಾಮಗಾರಿಗಳ ಮೇಲುಸ್ತುವಾರಿಯಲ್ಲಿ ಕರ್ತವ್ಯಲೋಪ ಹಿನ್ನೆಲೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ.
ಭದ್ರಾವತಿ ಗ್ರಾಮೀಣ ಉಪ ವಿಭಾಗ ಘಟಕ 1 ಕಿರಿಯ ಎಂಜಿನಿಯರ್ ಕೆ.ಬಾಲಕೃಷ್ಣ, ಶಿವಮೊಗ್ಗದ ಕಾರ್ಯ ಮತ್ತು ಪಾಲನಾ ವೃತ್ತ ಎಂಆರ್‍ಟಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಮದನ್ ಅವರನ್ನು ಅಮಾನತುಗೊಳಿಸಿ ಮೆಸ್ಕಾಂ ಪ್ರಧಾನ ವ್ಯವಸ್ಥಾಪಕರು ಆದೇಶಿಸಿದ್ದಾರೆ.

ಮದನ್ ಅವರು ಕುಂಸಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿಗಳ ಮೇಲುಸ್ತುವಾರಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಶಿವಮೊಗ್ಗ ವಲಯದ ಮುಖ್ಯ ಎಂಜಿನಿಯರ್ ಅವರು ನೀಡಿರುವ ವರದಿ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.

error: Content is protected !!