‘ಪ್ರಕಾಶ್’ ಟ್ರಾವೆಲ್ಸ್ ಮಾಲೀಕರ ರೋಚಕ ಬದುಕು, ಪ್ರತಿ ನವೋದ್ಯಮಿಗೂ ಮಾದರಿ, ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ಅಂಶಗಳಿವು

 

 

ಸುದ್ದಿ ಕಣಜ.ಕಾಂ | DISTRICT | NUDI NAMANA
ಶಿವಮೊಗ್ಗ: ಕ್ಲೀನರ್ ನಿಂದ ಆರಂಭವಾದ ಪ್ರಕಾಶ್ ಅವರ ಉದ್ಯಮದ ಜೀವನ 50 ಬಸ್ ಗಳ ಒಡೆಯರಾಗುವ ಮಟ್ಟಕ್ಕೆ ಬೆಳೆದಿತ್ತು. ಆದರೆ, ಈ ಉದ್ಯಮಿಯ ಬದುಕಿನ ದೀಪವೀಗ ಹಠಾತ್ ಆಗಿ ಆರಿ ಹೋಗಿದ್ದು, ನಂಬಲಾಗುತ್ತಿಲ್ಲ.
ಹಾಸನ ಜಿಲ್ಲೆಯ ಕಾಣೆಗೆರೆಯ ಪ್ರಕಾಶ್ ಅವರು ಶಿವಮೊಗ್ಗಕ್ಕೆ ಬಂದಿದ್ದು, ಉದ್ಯೋಗ ಅರಸಿಕೊಂಡು. ಸಾಗರದಲ್ಲಿ ಕೆಲಸ ಆರಂಭಿಸಿದ ಅವರು ಶಾರದಾ ಡ್ರೈವಿಂಗ್ ಸ್ಕೂಲ್ ಚಾಲಕ ಮತ್ತು ಗೀತಾ ಬಸ್ ಕ್ಲೀನರ್, ಕಂಡಕ್ಟರ್ ಮತ್ತು ಚಾಲಕರಾಗಿ ಕಾರ್ಯನಿರ್ವಹಿಸಿದ್ದರು.

READ | ಶಿವಮೊಗ್ಗದಲ್ಲಿ ಪೊಲೀಸ್ ಸೈರನ್ ಸದ್ದು, ಎಲ್ಲೆಲ್ಲಿ ನಡೀತು ಕಾರ್ಯಾಚರಣೆ?

ಸಾಗರ- ಸೊರಬ-ಚಿಕ್ಕೆರೂರು ಮಾರ್ಗದ ಗುರು ರೇಣುಕಾ ಬಸ್ ಅನ್ನು ಖರೀದಿಸಿದರು. ಸಹೋದರ ಗಂಗರಾಜು ಮತ್ತೊಬ್ಬ ಸಂಬಂಧಿ ಅಣ್ಣಪ್ಪ ಅವರೊಂದಿಗೆ ಸೇರಿ ಪ್ರಕಾಶ್ ಟ್ರಾವೆಲ್ಸ್ ಉದ್ಯಮ ಆರಂಭಿಸಿದರು. ಮೊದಲಿಗೆ ಹಳೆಯ ಬಸ್ ನಿಂದ ಶುರುವಾದ ಉದ್ಯಮದ ಬದುಕು 50 ಬಸ್ ಗಳನ್ನು ಖರೀದಿಸುವ ಮಟ್ಟಿಗೆ ಬೆಳೆದಿತ್ತು.
2001ರಲ್ಲಿ ಬಸ್ ಸಂಸ್ಥೆ ಆರಂಭಿಸಿದ ಪ್ರಕಾಶ್ ಅವರು ಬೆಂಗಳೂರು, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ನಾನಾ ಜಿಲ್ಲೆಗಳಿಗೆ ಬಸ್ ಸೌಲಭ್ಯ ನೀಡಿದ್ದರು.
ಹಲವರಿಗೆ ಉದ್ಯೋಗ ನೀಡಿದ ಪ್ರಕಾಶ್
ಪ್ರಕಾಶ್ ಅವರು ಟ್ರಾವೆಲ್ಸ್ ಮೂಲಕ ಹಲವರಿಗೆ ಉದ್ಯೋಗ ನೀಡಿದ್ದರು. ವಿಶೇಷವೆಂದರೆ, ಕೋವಿಡ್ ಸಂದರ್ಭದಲ್ಲೂ 200ಕ್ಕೂ ಅಧಿಕ ಕಾರ್ಮಿಕರಿಗೆ ಸಂಬಳ ಆದಿಯಾಗಿ ನೀಡುತ್ತಿದ್ದರು. ಕೋವಿಡ್ ನಿಂದಾಗಿ ಟ್ರಾವೆಲ್ಸ್ ಉದ್ಯಮ ಸಾಕಷ್ಟು ನಷ್ಟ ಅನುಭವಿಸಿದ್ದು, ಇದು ಸಹ ಪ್ರಕಾಶ್ ಪಾಲಿಗೆ ನುಂಗಲಾರದ ತುತ್ತಾಗಿ ಮಾರ್ಪಟ್ಟಿತ್ತು.

READ | KPTCL ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಈಗಲೇ ಅರ್ಜಿ ಸಲ್ಲಿಸಿ

ಶವವಾಗಿ ಪತ್ತೆಯಾದ ಟ್ರಾವೆಲ್ಸ್ ಮಾಲೀಕ
ಶಿವಮೊಗ್ಗದಿಂದ ರಾಜ್ಯದ ಹಲವೆಡೆ ಬಸ್ ಸಂಚಾರ ಆರಂಭಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಪ್ರಕಾಶ್ ಅವರು ಬದುಕಿನ ಪಯಣವನ್ನು ಮುಗಿಸಿದ್ದಾರೆ. ವಿಪರ್ಯಾಸವೆಂದರೆ, ಅವರ ಬದುಕು ದುರಂತ ಅಂತ್ಯ ಕಂಡಿರುವುದು ಆಪ್ತೆಷ್ಠರಿಗೆ ಗರಬಡಿದಂತಾಗಿದೆ.
ಶರಾವತಿ ಹಿನ್ನೀರಿನಲ್ಲಿ ಇವರಿಗಾಗಿ ನಿರಂತರ ಹುಡುಕಾಟ ನಡೆಯುತಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಆದರೆ, ಪಟಗುಪ್ಪ ಸೇತುವೆಯ ಬಳಿ ಪ್ರಕಾಶ್ (47) ಶವವು ಪತ್ತೆಯಾಗಿದೆ. ಸೇತುವೆಯಿಂದ ಅನತಿ ದೂರದಲ್ಲಿ ಶವವು ಪತ್ತೆಯಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಪ್ರಕಾಶ್ ಅವರು ಏಕಾಏಕಿ ಕಣ್ಮರೆಯಾಗಿದ್ದು, ಹಿನ್ನೀರಿನಲ್ಲಿ ಶವ ಪತ್ತೆಯಾಗಿದ್ದು, ಇವೆಲ್ಲವುಗಳ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಹಾಲಪ್ಪ ಕೂಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದುವರೆಗೆ, ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ತನಿಖೆ ನಡೆಯುತ್ತಿದೆ.

https://www.suddikanaja.com/2021/09/20/worst-condition-due-to-problems/

error: Content is protected !!